ಮಂಡ್ಯ:- ಹಾಡುಹಗಲೇ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಇಬ್ಬರು ಖದೀಮರಿಗೆ ಸ್ಥಳೀಯರು ಗೂಸಾ ಕೊಟ್ಟಿರುವ ಘಟನೆ ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ಗ್ರಾಮದಲ್ಲಿ ಜರುಗಿದೆ.
Advertisement
ಇಲ್ಲಿನ ಪುರಸಭಾ ಸದಸ್ಯ G.S.ಶಿವು ಮನೆಗೆ ಹಿಂಬಾಗಿಲಿನಿಂದ ಒಳ ಪ್ರವೇಶಿಸಿ ಖದೀಮರು ಕಳ್ಳತನಕ್ಕೆ ಮುಂದಾಗಿದ್ದರು. ಈ ವೇಳೆ ಇಬ್ಬರು ಲಾಕ್ ಆಗಿದ್ದು, ಸ್ಥಳೀಯರು ಗೂಸಾ ಕೊಟ್ಟಿದ್ದಾರೆ. ಬಳಿಕ ಪೊಲೀಸರಿಗೆ ಕಳ್ಳರನ್ನು ಒಪ್ಪಿಸಿದ್ದಾರೆ.
ಈ ಬಂಧಿತ ಕಳ್ಳರು, ಹಳೆಯ ಗುಜರಿ ಸಾಮಾನು ಖರೀದಿಸುವ ಕೆಲಸ ಮಾಡ್ತಾ ಇದ್ದರು ಎಂದು ತಿಳಿದು ಬಂದಿದೆ. ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.