ಮಂಗಳೂರು:- ದಕ್ಷಿಣ ಕನ್ನಡ ಜಿಲ್ಲೆಯ ಯುವಕನೋರ್ವ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಐರ್ಲೆಂಡ್ ನಲ್ಲಿ ಜರುಗಿದೆ.
31 ವರ್ಷದ ಸಾಂಜೋ ಸುನೀಲ್ ಮೃತ ಯುವಕ. ಸದ್ಯ ಸುನೀಲ್ ಅನುಮಾನಾಸ್ಪದ ಸಾವಿನ ಬಗ್ಗೆ ಐರ್ಲೆಂಡ್ ಪೊಲೀಸರು ತನಿಖೆ ನಡೆಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಟ್ರುಪಾಡಿ ವಿಮಲಗಿರಿ ಸಾಂಜೋ ಸುನೀಲ್ ಐರ್ಲೆಂಡ್ನ ಡಬ್ಲಿನ್ನ ಫಿಂಗ್ಲಾಸ್ನ ಚಾರ್ಲ್ಸ್ಟೌನ್ನಲ್ಲಿರುವ ಮನೆಯೊಂದರಲ್ಲಿ ವಾಸವಾಗಿದ್ದರು. ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಸುನೀಲ್ ಮೃತದೇಹ ಪತ್ತೆ ಆಗಿದೆ. ಪತ್ನಿ ಕೆಲಸಕ್ಕೆ ತೆರಳಿದ್ದ ವೇಳೆ ಘಟನೆ ನಡೆದಿದೆ. ಆತ್ಮಹತ್ಯೆ ಅಥವಾ ಬೇರೆ ಏನಾದರೂ ಆಗಿದೆಯಾ ಎಂದು ಸದ್ಯ ಐರ್ಲೆಂಡ್ ಪೊಲೀಸರು ತನಿಖೆ ನಡೆಸಿದ್ದಾರೆ.
ವರ್ಷದ ಹಿಂದೆ ಕಡಬ ಮೂಲದ ಯುವತಿಯನ್ನ ಸಾಂಜೋ ಸುನೀಲ್ ವಿವಾಹವಾಗಿದ್ದರು. ಮೊದಲು ಇಸ್ರೇಲ್ನಲ್ಲಿ ಕೆಲಸ ಮಾಡಿಕೊಂಡಿದ್ದ ಸುನೀಲ್, ಪತ್ನಿ ಐರ್ಲೆಂಡ್ನಲ್ಲಿ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದ ಹಿನ್ನೆಲೆ ಕೆಲವು ತಿಂಗಳ ಹಿಂದಷ್ಟೇ ಐರ್ಲೆಂಡ್ಗೆ ತೆರಳಿ ವಾಸವಾಗಿದ್ದರು. ಸದ್ಯ ಸುನೀಲ್ ಅನುಮಾನಾಸ್ಪದ ಸಾವು ಸಾಕಷ್ಟು ಅನುಮಾನ ಹುಟ್ಟುಹಾಕಿದೆ.



