Mangaluru Dinesh: ರಂಗಭೂಮಿ ಕಲಾವಿದ, ನಟ ದಿನೇಶ್ ಮಂಗಳೂರು ನಿಧನ!

0
Spread the love

‘ಆ ದಿನಗಳು’, ‘ಕೆಜಿಎಫ್’, ‘ಉಳಿದವರು ಕಂಡಂತೆ ಖ್ಯಾತಿಯ ನಟ ನಿಧನರಾಗಿದ್ದಾರೆ. ಇಂದು ಕುಂದಾಪುರದ ಮನೆಯಲ್ಲೇ ಬೆಳಗಿನ‌ಜಾವ ಕೊನೆಯುಸಿರು ಎಳೆದಿದ್ದಾರೆ. ಒಂದು ವರ್ಷದಿಂದ ಅನಾರೋಗ್ಯದಿಂದ ಇವರು ಬಳಲುತ್ತಿದ್ದರು. ಇಂದು ಸಂಜೆ ಪಾರ್ಥಿವ ಶರೀರ ಬೆಂಗಳೂರಿಗೆ ಬರಲಿದ್ದು,

Advertisement

ನಾಳೆ ಸುಮನಹಳ್ಳಿ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಮಂಗಳೂರು ದಿನೇಶ್ ಅವರ ಅಗಲಿಕೆಯಿಂದ ಅಭಿಮಾನಿಗಳಿಗೆ, ಆಪ್ತರಿಗೆ, ಕುಟುಂಬದವರಿಗೆ ತೀವ್ರ ನೋವುಂಟಾಗಿದೆ.

‘ಆ ದಿನಗಳು’, ‘ಕೆಜಿಎಫ್’, ‘ಉಳಿದವರು ಕಂಡಂತೆ’, ‘ಕಿಚ್ಚ’, ‘ಕಿರಿಕ್ ಪಾರ್ಟಿ’ ಮುಂತಾದ ಸಿನಿಮಾಗಳಲ್ಲಿ ದಿನೇಶ್ ಮಂಗಳೂರು ಅವರು ನಟಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ಅವರು ಬಹುಬೇಡಿಕೆಯ ಪೋಷಕ ನಟನಾಗಿ ಅವರು ಗುರುತಿಸಿಕೊಂಡಿದ್ದರು.


Spread the love

LEAVE A REPLY

Please enter your comment!
Please enter your name here