ಮಂಗಳೂರು: ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ರಾಜ್ಯದಾದ್ಯಂತ ಸಿಎಂ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ನಗರದ ಲೇಡಿಹಿಲ್‌ನ ನಾರಾಯಣ ಗುರು ವೃತ್ತದಿಂದ ಲಾಲ್‌ಬಾಗ್‌ನ ಮಹಾನಗರ ಪಾಲಿಕೆ ಕಚೇರಿಗೆ ತನಕ ಪಾದಯಾತ್ರೆ ಆಯೋಜಿಸಲಾಗಿತ್ತು.
Advertisement
ಈ ಮಧ್ಯೆ ನಡೆದ ಕಲ್ಲು ತೂರಾಟದಿಂದ ಖಾಸಗಿ ಬಸ್ಸಿನ ಮುಂಭಾಗದ ಗಾಜು ಪೂರ್ಣ ಧ್ವಂಸವಾಗಿದೆ. ಮಹಿಳೆಯೊಬ್ಬರ ಕಣ್ಣಿಗೆ ತರಚಿದ ಗಾಯವಾಗಿದೆ. ಪ್ರತಿಭಟನೆಯಲ್ಲಿ ಹಠಾತ್ ರಸ್ತೆ ತಡೆ, ಬಸ್ಸಿಗೆ ಕಲ್ಲು ತೂರಾಟ, ಟೈರ್‌ಗೆ ಬೆಂಕಿ ಹಚ್ಚಲಾಗಿದೆ.