ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದ ಅಸಾಮಿ: ಮಹಿಳೆ ಮಾಂಗಲ್ಯ ಸರ ದೋಚಿ ಪರಾರಿ..!

0
Spread the love

ಗದಗ: ಖದೀಮನೊಬ್ಬ ಬೆಳ್ಳಂಬೆಳಿಗ್ಗೆ ಮಾಂಗಲ್ಯ ಸರ ದೋಚಿ ಎಸ್ಕೇಪ್ ಆಗಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಡಾಲರ್ಸ್ ಕಾಲೋನಿಯಲ್ಲಿ ನಡೆದಿದೆ.

Advertisement

ಮಂಜುಳಾ ಮೋಹನ ಹಂಪಿ ಅನ್ನೋರ ಚಿನ್ನದ ಮಾಂಗಲ್ಯ ಸರ ಕಿತ್ತು ದುಷ್ಕರ್ಮಿ ಪರಾರಿಯಾಗಿದ್ದು, ಬೆಳ್ಳಂಬೆಳಿಗ್ಗೆ ಗ್ರಾಹಕನಂತೆ ವರ್ತಿಸಿ, ಅಂಗಡಿ ಮಾಲೀಕಳ ಗಮನ ಬೇರೆಡೆ ಸೆಳೆದು ಕತ್ತಲ್ಲಿದ್ದ 20 ಗ್ರಾಂ ಚಿನ್ನದ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದಾನೆ.

ಕಳೆದ ವಾರವಷ್ಟೇ ಖದೀಮರು ವೃದ್ಧನ ಕೈಯಲ್ಲಿನ ಚಿನ್ನದ ರಿಂಗ್ ಎಗರಿಸಿದ್ದರು.
ಇದೀಗ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಪಟ್ಟಣದಲ್ಲಿ ಹಾಡುಹಗಲೇ ಹೆಚ್ಚುತ್ತಿರುವ ಕಳ್ಳತನದಿಂದ ಪಟ್ಟಣದ ಜನರು ಹೊರಗಡೆ ಓಡಾಡೋಕೆ ಭಯಪಡುತ್ತಿದ್ದು, ಇದಕ್ಕೆಲ್ಲ ಕಡಿವಾಣ ಹಾಕುವಂತೆ ಪೊಲೀಸ್ ಇಲಾಖೆಗೆ ಸಾರ್ವಜನಿಕರ ಆಗ್ರಹಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here