ಶಿವಮೊಗ್ಗದಲ್ಲಿ ಮಂಗನಕಾಯಿಲೆ ಭೀತಿ: ಸೋಂಕಿಗೆ ಬಲಿಯಾದ 8 ವರ್ಷದ ಬಾಲಕ!

0
Spread the love

ಶಿವಮೊಗ್ಗ: ಮಂಗನ ಕಾಯಿಲೆಗೆ 8 ವರ್ಷದ ಬಾಲಕ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಜರುಗಿದೆ. ರಚಿತ್ ಮೃತ ಬಾಲಕ. ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಬಾಲಕ ಸಾವನ್ನಪ್ಪಿದ್ದಾನೆ.

Advertisement

ಬಾಲಕ ಸಾವಿನ ಕುರಿತು ಒಂದು ವಾರದಲ್ಲಿ ಡೆತ್ ಅಡಿಟ್​ ವರದಿ ನೀಡಲು ಶಿವಮೊಗ್ಗ ಡಿಸಿ ಗುರುದತ್ತ ಹೆಗಡೆ ಆರೋಗ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ. ಇನ್ನು ಬೇಸಿಗೆ ತಿಂಗಳಲ್ಲಿ ಮಂಗನ ಕಾಯಿಲೆ ಉಲ್ಬಣಗೊಳ್ಳುತ್ತಿದ್ದು, ಮಂಗನ ಕಾಯಿಲೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಪರದಾಡುತ್ತಿದ್ದಾರೆ. ಹೀಗಾಗಿ ಕಾಡಿನಂಚಿನಲ್ಲಿ ನೆಲಸಿರುವ ಗ್ರಾಮಸ್ಥರು ಆತಂಕದಲ್ಲಿದ್ದಾರೆ.

ಇನ್ನೂ ಮತ್ತೊಂದೆಡೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಮಂಗನ ಕಾಯಿಲೆ ವಿಚಾರದಲ್ಲಿ ಭಾರಿ ನಿರಾಳತೆ ಕಂಡು ಕೊಂಡಿತ್ತು. ಕಳೆದ ವರ್ಷಕ್ಕೆ ಹೊಲಿಕೆ ಮಾಡಿದರೆ ಈ ವರ್ಷ ಬೆರಳಣಿಕೆಯಷ್ಟು ಪ್ರಕರಣ ದಾಖಲಾಗಿದ್ದವು. ಜಿಲ್ಲೆಯ ಜನ ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ.


Spread the love

LEAVE A REPLY

Please enter your comment!
Please enter your name here