ಗದಗ:- ಬಿಸಿಲುನಾಡು ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳ್ಳಂಬೆಳಗ್ಗೆ ಮಂಜಿನ ವಾತಾವರಣ ಕಂಡು ಬಂದಿದ್ದು, ಇಲ್ಲಿನ ಜನತೆ ಫುಲ್ ಖುಷ್ ಆಗಿದ್ದಾರೆ.
Advertisement
ಬಿಸಿಲುನಾಡಿನಲ್ಲಿ ಬೆಳ್ಳಂಬೆಳಗ್ಗೆ ಮಂಜಿನ ಮೋಜಿಗೆ ಅವಳಿ ನಗರದ ಜನರು ಫುಲ್ ಖುಷ್ ಆಗಿದ್ದು, ಗ್ರಾಮೀಣ ಭಾಗದಲ್ಲೂ ಈ ಮಂಜು ಆವರಿಸಿತ್ತು. ಇದರಿಂದಾಗಿ ರಸ್ತೆಯೂ ಕಾಣಲ್ಲ, ಅಕ್ಕಪಕ್ಕದ ಮನೆಗಳು ಕಾಣದಂತೆ ಮಂಜಿನ ಮುಸುಕು ಪಸರಿಸಿತ್ತು. ಬಿಸಿಲುನಾಡಿನ ಜನತೆ, ಮಂಜಿನ ಆಟನೋಡಿ ಪುಳಕಿತರಾಗಿದ್ದಾರೆ.
ಬೆಳಗ್ಗೆ 8 ಗಂಟೆಯಾದ್ರೂ ಮಂಜಿನ ಆಟ ಮುಂದುವರಿದಿದ್ದು, ಒಟ್ಟಾರೆ ಬಿಸಿಲ ನಾಡಲ್ಲಿ ಮಂಜಿನ ವಾತವರಣ ಕಂಡು ಇಲ್ಲಿನ ಜನ ಎಂಜಾಯ್ ಮಾಡುತ್ತಿದ್ದಾರೆ.