ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಪಟ್ಟಣದ ರೋಣ ರಸ್ತೆಯಲ್ಲಿನ ಪ್ರವಾಸಿ ಮಂದಿರದಲ್ಲಿ ಬುಧವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಮಂಜುನಾಥ ರಾಠೋಡ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಗೌರವಾಧ್ಯಕ್ಷರಾಗಿ ಪ್ರಾಣೇಶ ಕೊಡಗಾನೂರ, ಉಪಾಧ್ಯಕ್ಷರಾಗಿ ಚನ್ನು ಸಮಗಂಡಿ, ಮಲ್ಲಯ್ಯ ಗುಂಡಗೋಪುರಮಠ, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಎಂ. ಸೈಯದ್, ಸಹ ಕಾರ್ಯದರ್ಶಿಗಳಾಗಿ ಅಲ್ಲಾಭಕ್ಷಿ ನದಾಫ್, ಸಂಗಮೇಶ ಮೆಣಸಗಿ, ಖಜಾಂಚಿಯಾಗಿ ಶೀತಲ ಓಲೆಕಾರ ಆಯ್ಕೆಯಾದರು.
ಸಭೆಯ ಅಧ್ಯಕ್ಷತೆಯನ್ನು ಗಜೇಂದ್ರಗಡ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಶ್ರೀಶೈಲ ಕುಂಬಾರ ವಹಿಸಿದ್ದರು. ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ನಿಂಗಪ್ಪ ಬೇವಿನಕಟ್ಟಿ, ಶಿವಕುಮಾರ ಶಶಿಮಠ, ಯಲ್ಪಪ್ಪ ತಳವಾರ ಸೇರಿ ನರೇಗಲ್ ಹೋಬಳಿಯ ವರದಿಗಾರರು ಇದ್ದರು.



