ಕಾರವಾರ:- ಇಲ್ಲಿನ ಗಂಗಾವಳಿ ನದಿಯಲ್ಲಿ ನಡೆದ ಶವ ಶೋಧ ಕಾರ್ಯಾಚರಣೆಯಲ್ಲಿ ಮನುಷ್ಯನ ಎದೆ ಹಾಗೂ ಕೈ ಭಾಗದ ಮೂಳೆಗಳು ದೊರೆತಿವೆ.
Advertisement
ಭಾನುವಾರ ನಡೆದ ಕಾರ್ಯಾಚರಣೆಯಲ್ಲಿ ಆಲದ ಮರ ಸೇರಿದಂತೆ ಹಲವು ವಸ್ತುಗಳನ್ನು ಹೊರತೆಗೆಯಲಾಗಿತ್ತು. ಇಂದು ಶವದ ಪಳೆಯುಳಿಕೆಗಳು ದೊರೆತಿದ್ದು, ಡಿಎನ್‌ಎ ಪರೀಕ್ಷೆಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ.
ಮೂರನೇ ಹಂತದ ಶವ ಶೋಧದಲ್ಲಿ ಅರ್ಜುನ್ ಶವ ಹೊರ ತೆಗೆಯಲಾಗಿದೆ. ಶಿರೂರಿನ ಜಗನ್ನಾಥ್, ಲೋಕೇಶ್ ಅವರ ಶವ ಇನ್ನಷ್ಟೇ ಸಿಗಬೇಕಿದೆ. ಅಂಕೋಲ ಪೊಲೀಸರು ಸಿಕ್ಕ ಅಸ್ತಿಪಂಜರದ ಮೂಳೆಗಳನ್ನು ಡಿಎನ್‌ಎ ಪರೀಕ್ಷೆಗೆ ರವಾನೆ ಮಾಡಲಿದ್ದಾರೆ. ಸದ್ಯ ಈ ಮೂಳೆಗಳು ಯಾರದ್ದು ಎಂಬ ಬಗ್ಗೆ ಮಾಹಿತಿ ಡಿಎನ್‌ಎ ಪರೀಕ್ಷೆ ನಂತರ ತಿಳಿದು ಬರಲಿದೆ.