ಬೆಂಗಳೂರು : ಹೊಸ ವರ್ಷಾಚರಣೆ ಸಂಭ್ರಮದ ಪಾರ್ಟಿಗಳಿಗೆ ಮಾದಕ ವಸ್ತು ಸರಬರಾಜು ಹಾಗೂ ಅಹಿತಕರ ಘಟನೆಗಳು ಜರುಗದಂತೆ ತಡೆಯಲು ಅಲರ್ಟ್ ಆಗಿರುವ ನಗರ ಪೊಲೀಸರು, ಡ್ರಗ್ಸ್ ಪೆಡ್ಲರ್‌ಗಳು ಹಾಗೂ ಅಪರಾಧ ಹಿನ್ನೆಲೆಯುಳ್ಳವರು, ರೌಡಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಇದೀಗ ರೈಲ್ವೆ ಪೊಲೀಸ್ ದಳದಿಂದ ಕಾರ್ಯಾಚರಣೆ ನಡೆಸಿ ಬರೋಬ್ಬರಿ 1 ಕೋಟಿ ರೂ . ಮೌಲ್ಯದ ಗಾಂಜ ವಶಕ್ಕೆ ಪಡೆದಿದ್ದಾರೆ. ಅದಲ್ಲದೆ 8 ಜನರನ್ನು ಬಂಧೀಸಿದ್ದಾರೆ.
ರೈಲ್ವೆ ಪೊಲೀಸ್ ಅಧಿಕಾರಿಗಳಿಗೆ ದೊರಕಿದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆಯನ್ನು ರೂಪಿಸಲಾಗಿತ್ತು. ಶುಕ್ರವಾರ ಬೆಳಗ್ಗಿನ ವೇಳೆಗೆ ಆರೋಪಿಗಳು ಗಾಂಜ ಸಾಗಿಸುತ್ತಿದ್ದಾರೆಂಬ ಖಚಿತ ಮಾಹಿತಿ ಪಡೆದು, ಅಧಿಕಾರಿಗಳು ತಮ್ಮ ಬಲವನ್ನು ಸಜ್ಜಾಗಿಸಿಕೊಂಡರು.
ಜಪ್ತಿಗೊಳಿಸಿದ ಗಾಂಜಾ ಸುಮಾರು 100 ಕಿಲೋಗೂ ಹೆಚ್ಚು ತೂಕದ್ದಾಗಿದ್ದು, ಇದು ನಗರಕ್ಕೆ ಮಾದಕ ಪದಾರ್ಥ ಮಾರಾಟದ ಪ್ರಮುಖ ಭಾಗವಾಗಿತ್ತು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಬಂಧಿತ ಆರೋಪಿಗಳನ್ನು ವಿಶೇಷ ಪರಿಶೋಧನೆಗೆ ಒಳಪಡಿಸಿದ್ದಾರೆ , ಗಾಂಜ ಸಾಗಣಿಕೆಯ ಹಿಂದಿರುವ ಪ್ರಮುಖ ಜಾಲದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಆ 8 ಮಂದಿಯನ್ನು ಬೆಂಗಳೂರಿನ ರೈಲ್ವೆ ಪೊಲೀಸರು ಬಂಧಿಸಿದ್ದಾರೆ .