ಮೋಸದಿಂದ ಮದುವೆ, ಮತಾಂತರಕ್ಕೆ ಕಿರುಕುಳ: ಗಂಡನ ವಿರುದ್ಧ ಠಾಣೆ ಮೆಟ್ಟಿಲೇರಿದ ಪತ್ನಿ!

0
Spread the love

ಹುಬ್ಬಳ್ಳಿ:- ಮೋಸದಿಂದ ಮದುವೆಯಾದ ಭೂಪನೊಬ್ಬ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುವಂತೆ ತನ್ನ 2 ನೇ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಈ ಹಿನ್ನೆಲೆ ಹೆಂಡತಿ ಠಾಣೆ ಮೆಟ್ಟಿಲೇರಿದ್ದಾರೆ. ಮುಜಾಹಿದ್ ಖಾನ್ ಕೊಲೆ ಬೆದರಿಕೆ ಹಾಕಿದ ಆರೋಪಿ. ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. \

Advertisement

ಮಹಿಳೆ ಅಜ್ಜಿಯೊಂದಿಗೆ ಕಲಘಟಗಿಯಲ್ಲಿ ವಾಸವಾಗಿದ್ದು, ಬೆಂಗಳೂರಿನಲ್ಲಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಮುಜಾಹಿದ್ ಖಾನ್ ಕಾರ್ಯ ನಿರ್ವಹಿಸುತ್ತಿದ್ದಾನೆ. ಇಬ್ಬರು ಸಹೋದ್ಯೋಗಿಗಳಾಗಿದ್ದರಿಂದ ಸ್ನೇಹ ಬೆಳೆದಿದೆ. ಸ್ನೇಹ ಪ್ರೇಮಕ್ಕೆ ತಿರುಗಿದೆ. ನಂತರ 2017ರಲ್ಲಿ ಮುಜಾಹಿದ್ ಖಾನ್ ಮತ್ತು ಮಹಿಳೆ ಮದುವೆ ಆಗಿದ್ದಾರೆ.

ಆದರೆ, ಮುಜಾಹಿದ್ ಖಾನ್​ಗೆ ಒಂದು ಮದುವೆಯಾಗಿದ್ದು, ನಾಲ್ಕು ಮಕ್ಕಳಿದ್ದಾರೆ. ಈ ವಿಚಾರವನ್ನು ಮುಚ್ಚಿಟ್ಟು ಮುಜಾಹಿದ್ ಖಾನ್ ಎರಡನೇ ಮದುವೆಯಾಗಿದ್ದಾನೆ. ಮದುವೆಯಾದ ಹೊಸದರಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಮಹಿಳೆಗೆ ಮುಜಾಹಿದ್ ಖಾನ್​ನ ಮೊದಲನೇ ಮದುವೆ ವಿಚಾರ ತಿಳಿದಿದೆ. ಮತ್ತು ಮುಜಾಹಿದ್ ಖಾನ್ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುವಂತೆ ಮಹಿಳೆಗೆ ಒತ್ತಾಯ ಮಾಡಲು ಆರಂಭಿಸಿದ್ದಾನೆ. ಈ ವಿಚಾರವಾಗಿ ಇಬ್ಬರು ಜಗಳವಾಡಿದ್ದಾರೆ. ಇಬ್ಬರ ನಡುವೆ ಬಿರುಕು ಮೂಡಿದೆ.

ನಂತರ ಮಹಿಳೆ ಕಲಘಟಗಿಗೆ ವಾಪಸ್​ ಆಗಿದ್ದಾಳೆ. ಬಳಿಕ, ಮುಜಾಹಿದ್ ಖಾನ್ ಕಲಘಟಗಿಗೆ ಬಂದು “ನೀನು ಎಲ್ಲಿಗಾದರೂ ಹೋಗು ನಿನಗೆ ಚಾಕು ಹಾಕುತ್ತೇನೆ‌” ಎಂದು ಮಹಿಳೆಗೆ ಬೆದರಿಕೆ ಹಾಕಿದ್ದಾನೆ. ಇದರಿಂದ ಬೆದರಿದ ಮಹಿಳೆ ಶ್ರೀರಾಮಸೇನೆ ಸೇನೆ ಆರಂಭಿಸಿರುವ ಲವ್‌ ಜಿಹಾದ್ ವಿರುದ್ಧದ ಸಹಾಯವಾಣಿಗೆ ಕರೆ ಮಾಡಿದ್ದಾಳೆ. ಆಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಶ್ರೀರಾಮಸೇನೆ ಸೇನೆ ಸಂಘಟನೆಯ ಸಹಾಯದಿಂದ ರೇಖಾ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಮುಜಾಹಿದ್ ಖಾನ್ ವಿರುದ್ದ ದೂರು ದಾಖಲಿಸಿದ್ದಾಳೆ. ಬಲವಂತಾಗಿ ಮತಾಂತರ ಆಗು, ಜೀವ ಬೆದರಿಕೆ ಹಾಕುತ್ತಿದ್ದಾನೆ ದೂರು ನೀಡಿದ್ದಾಳೆ.


Spread the love

LEAVE A REPLY

Please enter your comment!
Please enter your name here