ಡೆತ್‌ನೋಟ್ ಬರೆದಿಟ್ಟು ವಿವಾಹಿತ ಮಹಿಳೆ ಸೂಸೈಡ್: ಪ್ರಿಯಕರನ ಮೇಲೆ ಗಂಭೀರ ಆರೋಪ!

0
Spread the love

ಬಳ್ಳಾರಿ:- ಡೆತ್‌ನೋಟ್ ಬರೆದಿಟ್ಟು ವಿವಾಹಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮದಲಗಟ್ಟಿ ಗ್ರಾಮದ ತುಂಗಭದ್ರಾ ಸೇತುವೆ ಬಳಿ ನಡೆದಿದೆ.

Advertisement

ಕೆ.ಅಯ್ಯನಹಳ್ಳಿ ಗ್ರಾಮದ ವಿವಾಹಿತೆ ಮಹಿಳೆಯೊಬ್ಬರು ತನ್ನ ಸಾವಿನ ಕುರಿತು ಪತ್ರ ಬರೆದಿಟ್ಟಿದ್ದಾರೆ. ನನ್ನ ಸಾವಿಗೆ ನನ್ನ ಪ್ರಿಯತಮನೇ ಕಾರಣ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ನನ್ನ ಸಾವಿಗೆ ಸುಗೂರು ಶಿವಮೂರ್ತಿನೇ ಕಾರಣ, ಈತನಿಗೆ ಮರಣದಂಡನೆ ಶಿಕ್ಷೆ ಆಗಬೇಕು. ನನ್ನ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ, ಮದುವೆಯಾಗುವುದಾಗಿ ಹೇಳಿ ಮೋಸ ಮಾಡಿದ್ದಾನೆ. ನನ್ನ ಪ್ರೀತಿ ಮಾಡುತ್ತಾ ಸಾಕಷ್ಟು ಹುಡುಗಿಯರ ಜೊತೆ ಸುತ್ತಾಡಿ ಕೊನೆಗೆ ನನ್ನ ಬಿಟ್ಟಿದ್ದಾನೆ ಎಂದು ಉಲ್ಲೇಖಿಸಲಾಗಿದೆ.

ಮಹಿಳೆ ಸೇತುವೆಯಿಂದ ಜಿಗಿಯುತ್ತಿರುವುದನ್ನ ಬೈಕ್ ಸವಾರರು ನೋಡಿದ್ದಾರೆ. ಮಹಿಳೆ ನದಿಗೆ ಜಿಗಿದಿದ್ದನ್ನ ಯುವಕರು ನೋಡಿ ಮದಲಗಟ್ಟಿ ಗ್ರಾಮಸ್ಥರಿಗೆ ತಿಳಿಸಿದ್ದರು. ಅಕ್ಕಪಕ್ಕದಲ್ಲಿದ್ದ ಮೀನುಗಾರರು ಮಹಿಳೆಯನ್ನು ರಕ್ಷಿಸಿಲು ಪ್ರಯತ್ನಿಸಿದ್ದಾರೆ. ಆದರೆ ನೀರಿನ ರಭಸಕ್ಕೆ ಮಹಿಳೆ ಕೊಚ್ಚಿ ಹೋಗಿದ್ದಾರೆ.

ಹೂವಿನಹಡಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Spread the love

LEAVE A REPLY

Please enter your comment!
Please enter your name here