ಬೆಂಗಳೂರು: ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಕ್ಯಾಪ್ಟನ್ ಪ್ರಾಂಜಲ್ ಅವರ ಪಾರ್ಥಿವ ಶರೀರ ಇಂದು (ನ.24) ಬೆಂಗಳೂರಿಗೆ ಆಗಮಿಸಲಿದೆ. ಹೆಚ್ಎಎಲ್ ಏರ್ಪೋರ್ಟ್ಗೆ ಬರಲಿರುವ ಪ್ರಾಂಜಲ್ ಪಾರ್ಥಿವ ಶರೀರಕ್ಕೆ ಸರ್ಕಾರ ವತಿಯಿಂದ ಗೌರವ ಸಲ್ಲಿಸಲಾಗುತ್ತದೆ. ನಂತರ ಬನ್ನೇರುಘಟ್ಟ ಸಮೀಪ ನಂದನವನ ಲೇಔಟ್ ನಿವಾಸಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತದೆ.
Advertisement
ಇಲ್ಲಿ ಕುಟುಂಬಸ್ಥರು ಅಂತಿಮ ನಮನ ಸಲ್ಲಿಸುತ್ತಾರೆ. ಪ್ರಾಂಜಲ್ ಅವರ ತಂದೆ ವೆಂಕಟೇಶ್ ಎಂಆರ್ಪಿಎಲ್ನ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ. ಎಂಆರ್ಪಿಎಲ್ ಅಧಿಕಾರಿ ಸುದರ್ಶನ್ ಸೇರಿದಂತೆ 10 ಜನ ಸಿಬ್ಬಂದಿ ಪ್ರಾಂಜಲ್ ಅವರ ಮನೆಯಲ್ಲಿ ಮೊಕ್ಕಾಂ ಹೋಡಿದ್ದಾರೆ. ಸಿಬ್ಬಂದಿ ಮನೆಯ ಬಳಿ ಅಂತಿಮ ದರ್ಶನಕ್ಕೆ ಎಲ್ಲಾ ಸಿದ್ಧತೆ ಮಾಡುತ್ತಿದ್ದಾರೆ. ಸೋಮಸಂದ್ರಪಾಳ್ಯದ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ.