ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮೀಪದ ಹೂವಿನ ಶಿಗ್ಲಿ ಗ್ರಾಮದಲ್ಲಿನ ವಿರಕ್ತಮಠದಲ್ಲಿ ಜ. 15ರಂದು ನಡೆಯಲಿರುವ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮಠದಲ್ಲಿ ಸಾಮೂಹಿಕ ವಿವಾಹ ಜರುಗಲಿದ್ದು, ಆಸಕ್ತರು ಹೆಸರು ನೋಂದಾಯಿಸಿಕೊಳ್ಳಬೇಕೆಂದು ಶ್ರೀಮಠದ ಪ್ರಕಟಣೆ ವಿನಂತಿಸಿದೆ.
ಶ್ರೀ ಮಠದ ಮಠಾಧ್ಯಕ್ಷರಾದ ಚನ್ನವೀರ ಮಹಾಸ್ವಾಮಿಗಳವರ ನೇತೃತ್ವದಲ್ಲಿ ನಡೆಯುವ ಈ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ವರನಿಗೆ 21 ವರ್ಷ ತುಂಬಿರಬೇಕು, ವಧುವಿಗೆ 18 ವರ್ಷ ತುಂಬಿರಬೇಕು. ಇದರಲ್ಲಿ ಮರು ಮದುವೆಗೆ ಅವಕಾಶವಿರುವುದಿಲ್ಲ. ವರನು ಗ್ರಾಮ ಪಂಚಾಯಿತಿಯಿಂದ ಮೊದಲನೇ ಮದುವೆ ಎಂದು ಬರೆಸಿಕೊಂಡು ಬರಬೇಕು. ಜೊತೆಗೆ ಒಂದು ಫೋಟೋ, ಆಧಾರ್ ಕಾರ್ಡ್ ಜೆರಾಕ್ಸ್ ತರಬೇಕು. ವಧುವು ಶಾಲಾ ದಾಖಲಾತಿ, ಆಧಾರ್ ಕಾರ್ಡ್ ಜೆರಾಕ್ಸ್, ಒಂದು ಪ್ರತಿ ಫೋಟೋ ತರಬೇಕು. ಶ್ರೀಮಠದಿಂದ ವಧು-ವರರಿಗೆ ಬಾಸಿಂಗ, ದಂಡಿ ಮಾಲೆ ಹಾಗೂ ಸುರಗಿ ಕಾಯಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ 9538041989 ಹಾಗೂ 9742983190 ಸಂಪರ್ಕಿಸಲು ಕೋರಲಾಗಿದೆ.



