ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಜಿಯವರ ದಿವ್ಯ ಸಾನ್ನಿಧ್ಯದಲ್ಲಿ ನಗರದ ಅಶೋಕ ಸಂಕಣ್ಣವರ ಮಿಲ್‌ನಲ್ಲಿ ಜರುಗಿದ ಸಭೆಯಲ್ಲಿ ಡಿಸೆಂಬರ್ 10ರಂದು ಬೆಳಗಾವಿಯ ಗಾಂಧಿ ಭವನದಿಂದ ಸುವರ್ಣಸೌಧವರೆಗೆ ಮೌನ ಪಥಸಂಚಲನ ನಡೆಸಲು ನಿರ್ಣಯ ಕೈಗೊಳ್ಳಲಾಯಿತು. ಗದಗ ಜಿಲ್ಲೆಯ ಪಂಚಮಸಾಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಶ್ರೀಗಳು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯರ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ್, ಅಶೋಕ ಸಂಕಣ್ಣವರ, ಮೋಹನ ಮಾಳಶೆಟ್ಟಿ, ಎಸ್.ಎಸ್. ಹುರಕಡ್ಲಿ, ವಿರೂಪಾಕ್ಷಪ್ಪ ಮಟ್ಟಿ, ಕುಬೇರಗೌಡ ಮಲ್ಲಫೂರ, ಡಾ. ಎಸ್.ವಿ. ಶಿವನಗೌಡ್ರ, ಯುವ ಘಟಕದ ಅಧ್ಯಕ್ಷ ಅಯ್ಯಪ್ಪ ಅಂಗಡಿ, ವಸಂತ ಪಡಗದ, ಈರಣ್ಣ ಕೊಟಗಿ, ನಗರಸಭೆ ಸದಸ್ಯರಾದ ಮಹಾಂತೇಶ ನಲವಡಿ, ಪ್ರಕಾಶ್ ಅಂಗಡಿ, ಶಿವರಾಗೌಡ ಹಿರೇಮನಿಪಾಟೀಲ, ಸಂಗಮೇಶ ಕವಳಿಕಾಯಿ, ಮಹಿಳಾ ಘಟಕದ ಅಧ್ಯಕ್ಷರು ಲಲಿತಾ ಗೊಳಗೊಳಕಿ, ಸಿದ್ದಣ್ಣ ಜೀವನಗೌಡ್ರ, ಸಿದ್ದು ಪಾಟೀಲ್, ಉಮೇಶ್ ಚಿನ್ನು ಪಾಟೀಲ, ಶರಣಪ್ಪ ಗೊಳಗೊಳಕಿ, ಬಸವರಾಜ ಕಲ್ಲೂರ, ಉಮೇಶ ಮುಳ್ಳಾಳ, ಪ್ರಕಾಶ ಹಡಗಲಿ, ಪ್ರಭು ಬಳ್ಳಾರಿ, ಚಂದ್ರು ಪಾಟೀಲ್, ಸಂಗಮೇಶ ಗೊಂದಿ, ಸಂಗಮೇಶ ಅಂಗಡಿ, ಆನಂದ ಅಂಗಡಿ, ರವಿ ನರೇಗಲ್ಲ, ರಾಜು ರೊಟ್ಟಿ, ಈರಮ್ಮ ತಾಳಿಕೋಟಿ ಮುಂತಾದವರು ಉಪಸ್ಥಿತರಿದ್ದರು.



