ಚೆನ್ನೈ:- ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಪೋಟ ಸಂಭವಿಸಿ ಮೂವರು ಸಾವನ್ನಪ್ಪಿದ ಘಟನೆ ತಮಿಳುನಾಡಿನ ವಿರುಧ್ನಗರ ಜಿಲ್ಲೆಯ ಶಿವಕಾಶಿ ಬಳಿಯ ನಾರಣಾಪುರಂದಲ್ಲಿ ಜರುಗಿದೆ.
Advertisement
ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದರೆ, ಮೂವರಿಗೆ ಗಂಭೀರ ಗಾಯಗಳಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಸಂದರ್ಭ ದೊಡ್ಡ ಮಟ್ಟದ ಸ್ಫೋಟದ ಶಬ್ದ ಕೇಳಿ ಬಂತು. ಗಾಬರಿಯಲ್ಲಿ ಮನೆಯಿಂದ ಹೊರಗೆ ಬಂದಾಗ ಪಟಾಕಿ ಅಂಗಡಿ ಸ್ಫೋಟಗೊಂಡಿರುವುದು ಗೋಚರಿಸಿದೆ ಎಂದು ಸ್ಥಳೀಯರು ವಿವರಿಸಿದ್ದಾರೆ. ಘಟನಾ ರಕ್ಷಣಾ ತಂಡಗಳು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದೆ.