ಗದಗ: ದೀಪಾವಳಿ ಹಬ್ಬದ ಸಮಯದಲ್ಲಿ ಜೂಜಾಟದ ಹಾವಳಿ ತಡೆಗಟ್ಟುವ ಉದ್ದೇಶದಿಂದ ಗದಗ ಜಿಲ್ಲಾ ಪೊಲೀಸ್ ಇಲಾಖೆ ವಿಶೇಷ ದಾಳಿ ನಡೆಸಿ ಯಶಸ್ವಿಯಾಗಿದೆ.
ಎಸ್, ಅಕ್ಟೋಬರ್ 20ರಿಂದ 22ರವರೆಗೆ ಮೂರು ದಿನಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ ಒಟ್ಟು 61 ಪ್ರಕರಣಗಳು ದಾಖಲಾಗಿದ್ದು, 463 ಮಂದಿ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ.
ಜೂಜಾಟದಿಂದ ವಶಪಡಿಸಿಕೊಂಡ ₹5,15,650 ನಗದು ಪೊಲೀಸರು ಜಪ್ತಿ ಮಾಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಎಲ್ಲಾ ಠಾಣಾ ಸಿಬ್ಬಂದಿಯ ಸಂಯುಕ್ತ ಕಾರ್ಯಾಚರಣೆಯಿಂದ ಹಬ್ಬದ ವೇಳೆಯಲ್ಲಿನ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮಹತ್ತರ ಸಾಧನೆ ಸಾಧ್ಯವಾಗಿದೆ.
ಪೊಲೀಸ್ ಠಾಣಾವಾರು ಕ್ರಮ ವಿವರ:
ಶಿರಹಟ್ಟಿ: 12 ಆರೋಪಿಗಳು – ₹54,020 ಜಪ್ತಿ
ಗದಗ ಗ್ರಾಮೀಣ: 86 ಆರೋಪಿಗಳು – ₹2,03,760 ಜಪ್ತಿ
ಲಕ್ಷ್ಮೀಶ್ವರ: 26 ಆರೋಪಿಗಳು – ₹8,760 ಜಪ್ತಿ
ರೋಣ: 43 ಆರೋಪಿಗಳು – ₹29,200 ಜಪ್ತಿ
ಗದಗ ಶಹರ: 46 ಆರೋಪಿಗಳು – ₹31,850 ಜಪ್ತಿ
ಗಜೇಂದ್ರಗಡ: 27 ಆರೋಪಿಗಳು – ₹30,850 ಜಪ್ತಿ
ಬೆಟಗೇರಿ ಬಡಾವಣೆ: 32 ಆರೋಪಿಗಳು – ₹67,100 ಜಪ್ತಿ
ಬೆಟಗೇರಿ: 41 ಆರೋಪಿಗಳು – ₹44,740 ಜಪ್ತಿ
ಮುಳಗುಂದ: 25 ಆರೋಪಿಗಳು – ₹12,370 ಜಪ್ತಿ
ನರೇಗಲ್: 21 ಆರೋಪಿಗಳು – ₹10,020 ಜಪ್ತಿ
ಮುಂಡರಗಿ: 14 ಆರೋಪಿಗಳು – ₹20,260 ಜಪ್ತಿ
ನರಗುಂದ: 9 ಆರೋಪಿಗಳು – ₹2,720 ಜಪ್ತಿ
ಈ ಯಶಸ್ವಿ ಕಾರ್ಯಾಚರಣೆ ಜೂಜಾಟದ ಅಟ್ಟಹಾಸವನ್ನು ಕಡಿಮೆ ಮಾಡುವತ್ತ ಪೊಲೀಸರ ಬದ್ಧತೆಯನ್ನು ತೋರಿಸಿದೆ. ಸಾರ್ವಜನಿಕರು ಹಬ್ಬದ ಸಂದರ್ಭದಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿದ್ದು, ಶಾಂತಿಯುತವಾಗಿ ಹಬ್ಬವನ್ನು ಆಚರಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.



