ಬೆಂಗಳೂರು: ದೇವನಹಳ್ಳಿ ಸಮೀಪ ಫಾಕ್ಸ್‌ಕಾನ್ ಕಂಪನಿಯ ಐಫೋನ್ ಅಸೆಂಬ್ಲಿ ಘಟಕದಲ್ಲಿ ಭಾರೀ ಪ್ರಮಾಣದಲ್ಲಿ ನೇಮಕಾತಿ ನಡೆಯುತ್ತಿದೆ. ವರದಿಗಳ ಪ್ರಕಾರ, ಕೇವಲ ಎಂಟು ತಿಂಗಳಲ್ಲಿ ಈ ಫ್ಯಾಕ್ಟರಿಯಲ್ಲಿ ಸುಮಾರು 30,000 ಉದ್ಯೋಗಿಗಳನ್ನು ನೇಮಕ ಮಾಡಲಾಗಿದೆ.
ಇದು ಭಾರತದಲ್ಲಿಯೇ ಯಾವುದೇ ಸಂಸ್ಥೆಯು ಇಷ್ಟು ವೇಗದಲ್ಲಿ ಮಾಡಿರುವ ಅತ್ಯಂತ ದೊಡ್ಡ ನೇಮಕಾತಿಯಾಗಿದ್ದು, ಶೇ. 80ರಷ್ಟು ನೇಮಕವಾದವರು ಮಹಿಳೆಯರು ಆಗಿದ್ದಾರೆ. ಫ್ಯಾಕ್ಟರಿಯಲ್ಲಿ ಹೆಚ್ಚಿನವರು 19–24 ವಯೋಮಾನದ ಯುವಕರು ಹಾಗೂ ಹೆಚ್ಚಿನವರಿಗೆ ಇದು ಮೊದಲ ಉದ್ಯೋಗವಾಗಿದೆ. ಪಿಯುಸಿ ಅಥವಾ ಡಿಪ್ಲೊಮಾ ಪದವೀಧರರಿಗೆ ಆರು ತಿಂಗಳ ತರಬೇತಿ ನೀಡಿದ ನಂತರ ಅವರನ್ನು ಐಫೋನ್ ಅಸೆಂಬ್ಲಿ ಯುನಿಟ್‌ಗಳಲ್ಲಿ ಕೆಲಸಕ್ಕೆ ಸೇರಿಸಲಾಗುತ್ತದೆ. ಉದ್ಯೋಗಿಗಳ ಸುಲಭ ಸೌಕರ್ಯಕ್ಕಾಗಿ ಫ್ಯಾಕ್ಟರಿ ಹತ್ತಿರ ಟೌನ್‌ಶಿಪ್ ನಿರ್ಮಿಸಲಾಗುತ್ತಿದೆ.
2024 ಏಪ್ರಿಲ್-ಮೇ ತಿಂಗಳಲ್ಲಿ ಐಫೋನ್-16 ಅಸೆಂಬ್ಲಿಂಗ್ ಪ್ರಾರಂಭಗೊಂಡಿದ್ದು, ಈಗ ಐಫೋನ್-17 ಪ್ರೋ ಮ್ಯಾಕ್ಸ್ ಮಾದರಿಯ ಫೋನ್‌ಗಳನ್ನು ತಯಾರಿಸುತ್ತಿದ್ದಾರೆ. 300 ಎಕರೆ ಪ್ರದೇಶದಲ್ಲಿ ನಿರ್ಮಿತ ಘಟಕವು 50,000 ಜನರಿಗೆ ಉದ್ಯೋಗ ನೀಡಲು ಸಾಕ್ಷಮವಾಗಿದೆ, ಮತ್ತು ತಮಿಳುನಾಡಿನ ಫ್ಯಾಕ್ಟರಿಗಳಿಗಿಂತಲೂ ವಿಶಾಲವಾಗಿದೆ.
ಇತ್ತೀಚಿನ ದಿನಗಳಲ್ಲಿ ಐಟಿ ವೃತ್ತಿಪರರ ನೇಮಕಾತಿ ಕೂಡ ವೇಗವಾಗಿದೆ. 2025ರ ಒಳಗೆ 18 ಲಕ್ಷ ಹುದ್ದೆಗಳ ನೇಮಕಾತಿ ನಡೆದಿದ್ದು, ಹಿಂದಿನ ವರ್ಷದೊಂದಿಗೆ ಹೋಲಿಸಿದರೆ ಶೇ. 16ರಷ್ಟು ಹೆಚ್ಚಾಗಿದೆ. ಆದರೆ ಹೆಚ್ಚಿನ ನೇಮಕಾತಿ ಗ್ಲೋಬಲ್ ಕೇಪಬಿಲಿಟಿ ಸೆಂಟರ್‌ಗಳ ಮೂಲಕ ನಡೆಯುತ್ತಿದೆ.



