HomeGadag Newsದುಸ್ಥಿತಿಯಲ್ಲಿ ಯಜಮಾನ ಸಿದ್ದನಗೌಡರ ಪುತ್ಥಳಿ

ದುಸ್ಥಿತಿಯಲ್ಲಿ ಯಜಮಾನ ಸಿದ್ದನಗೌಡರ ಪುತ್ಥಳಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಏಷ್ಯಾ ಖಂಡದಲ್ಲೇ ಪ್ರಥಮವಾಗಿ ಸಹಕಾರ ಸಂಘ ಸ್ಥಾಪಿಸಿ ದೇಶಕ್ಕೆ ಕೀರ್ತಿ ತಂದ ಸಹಕಾರಿ ಸಂಘದ ಪಿತಾಮಹ ಕಣಗಿನಹಾಳದ ಯಜಮಾನ ಸಿದ್ದನಗೌಡ ಪಾಟೀಲರನ್ನು ದೇಶದ ಸಹಕಾರಿ ಸಂಘಗಳಲ್ಲಿ ಭಾವಚಿತ್ರ ಇಡುವ ಮೂಲಕ ಸ್ಮರಿಸಲಾಗುತ್ತದೆ. ಆದರೆ ಇವರ ಸಾಧನೆಗೆ ಹೆಮ್ಮೆ ಪಡೆಬೇಕಾದ ಹುಟ್ಟೂರು ಕಣಗಿನಹಾಳ ಗ್ರಾಮದಲ್ಲೇ ಅವರ ಪುತ್ಥಳಿ ಸುತ್ತಮುತ್ತ ಕಸದ ಕೊಂಪೆ ನಿರ್ಮಾಣವಾಗಿದ್ದು, ಅವರಿಗೆ ಅಗೌರವ ತಂದಿರುವುದು ಬೇಸರದ ಸಂಗತಿಯಾಗಿದೆ ಎಂದು ಕಣಗಿನಹಾಳ ಗ್ರಾಮದ ಹಾಲಪ್ಪ ಹೊಂಬಳರವರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿ, ಸಹಕಾರಿ ಸಂಘದ ಬಗ್ಗೆ ನಮ್ಮ ಜನಪ್ರತಿನಿಧಿಗಳು ಮಾತನಾಡುವಾಗ ಸಿದ್ದನಗೌಡ ಪಾಟೀಲರನ್ನು ನೆನೆಯುತ್ತಾ ಭಾಷಣ ಮಾಡುತ್ತಾರೆ. ಆದರೆ ಹಾಗೆಯೇ ಮರೆತುಬಿಡುತ್ತಾರೆ. ಅವರ ಸ್ವಗ್ರಾಮದಲ್ಲಿಯೇ ಅವರ ಪುತ್ಥಳಿಯನ್ನು ನಿರ್ಲಕ್ಷ್ಯ ಮಾಡಿದ್ದು ಬೇಸರದ ಸಂಗತಿಯಾಗಿದೆ. ಈ ಬಗ್ಗೆ ಕಣಗಿನಹಾಳ ಗ್ರಾ.ಪಂ, ಗದಗ ಜಿಲ್ಲಾಡಳಿತ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಂದು ಹಾಲಪ್ಪ ಹೊಂಬಳ, ನೀಲಪ್ಪ ಕುರಿ, ಹುಚ್ಚೀರಪ್ಪ ಕುರಿ, ಬಸಪ್ಪ ಹಾಲಣ್ಣವರ, ಅರ್ಜುನ ಕುರಿ ಮುಂತಾದವರು ಆಗ್ರಹಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!