ಗಣಿತ ವಿಷಯ ಕಬ್ಬಿಣದ ಕಡಲೆಯಲ್ಲ : ಎಚ್.ಎನ್. ನಾಯ್ಕ್

0
Mathematics Learning Movement Programme
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಶಿರಹಟ್ಟಿ ಹಾಗೂ ಗ್ರಾಮ ಪಂಚಾಯಿತಿ ಹುಲ್ಲೂರು ಸಹಯೋಗದಲ್ಲಿ ಹುಲ್ಲೂರು ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಗಣಿತ ಕಲಿಕಾ ಆಂದೋಲನದ ಶಾಲಾ ಮಕ್ಕಳ ಗಣಿತ ಸ್ಪರ್ಧೆಯ ತಾಲೂಕಾ ಮಟ್ಟದ ಕಾರ್ಯಕ್ರಮವನ್ನು ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯ್ಕ್ ಉದ್ಘಾಟಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗಣಿತ ಕಬ್ಬಿಣದ ಕಡಲೆ ಎನ್ನುವ ಭಾವನೆ ಎಲ್ಲರಲ್ಲಿ ಮನೆ ಮಾಡಿದೆ. ಆದರೆ ಗಣಿತ ಅತ್ಯಂತ ಸರಳ ವಿಷಯವಾಗಿದ್ದು, ಆಸಕ್ತಿಯಿಂದ ಕಲಿತರೆ ಅದರ ಮೇಲೆ ಹಿಡಿತ ಸಾಧಿಸಬಹುದು. ಮಕ್ಕಳಲ್ಲಿ ಗಣಿತ ಕಲಿಕೆ ದೃಢಗೊಂಡರೆ ಅದರ ಧನಾತ್ಮಕ ಪರಿಣಾಮ ಅವರ ವ್ಯಕ್ತಿತ್ವದ ಮೇಲೆ ಉಂಟಾಗುತ್ತದೆ. ಗಣಿತದ ಮೂಲಕ ನಾವು ನಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

ಎಸ್‌ಡಿಎಂಸಿ ಅಧ್ಯಕ್ಷ ಬರಮಪ್ಪ ಹಳ್ಳಿಗೊರವರ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸುರೇಶ ಸಾಸಲವಾಡ, ಗ್ರಾ.ಪಂ ಸದಸ್ಯರಾದ ಪಿ.ಪಿ. ಪಾಟೀಲ, ಯಲ್ಲಪ್ಪ ನರಸೋಜಿ, ಮಾಬೂಲಿ ಗಾಡಗೋಳಿ, ಶಂಕ್ರಪ್ಪ ಮಾಗಡಿ ಹಸನಸಾಬ ನದಾಫ, ಬಸವರಾಜ ಮೂಕಿ, ಬಸವರಾಜ ರಗಟಿ, ಫಕೀರೇಶ ರಗಟಿ ಪಾಲ್ಗೊಂಡಿದ್ದರು. ಲಾವಣ್ಯ ಮಾಗಡಿ ಪ್ರಾರ್ಥಿಸಿದಳು. ಸಿಆರ್‌ಪಿ ಗಿರೀಶ ನೇಕಾರ ಸ್ವಾಗತಿಸಿದರು.

ಎ.ಎಮ್.ಗುತ್ತಲ ನಿರೂಪಿಸಿದರು. ಶಾಲೆಯ ಮುಖ್ಯೋಪಾಧ್ಯಾಯ ಎಸ್.ಎಂ. ಲಮಾಣಿ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಸ್.ಜಿ. ರಾಜೋಳಿ, ಆರ್.ಜಿ. ಈಳಿಗೇರ, ಡಿ.ಎಲ್. ಪಾಟೀಲ, ಎಫ್.ಪಿ. ಡಂಬಳ, ಎಚ್.ಕೆ. ಮಸೂತಿ, ಜಿ.ಎಂ. ತಿರ್ಲಾಪುರ, ಜಿ.ಜಿ. ಸೂರಣಗಿ ಹಾಗೂ ಗ್ರಾಮದ ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು. ಹುಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 4, 5 ಹಾಗೂ 6ನೇ ತರಗತಿಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಗಣಿತ ಕಲಿಕಾ ಆಂದೋಲನದ ತಾಲೂಕಾ ನೋಡಲ್ ಅಧಿಕಾರಿ ಬಿಆರ್‌ಪಿ ಈಶ್ವರ ಮೆಡ್ಲೇರಿ, ಗಣಿತ ಕಲಿಕಾ ಆಂದೋಲನದ ಗಣಿತ ಸ್ಪರ್ಧೆಯು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾತ್ರ ಇದ್ದು, ಇದು ಅವರಲ್ಲಿ ಗಣಿತದ ಕಲಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶವನ್ನು ಹೊಂದಿದೆ. ಈ ಪರೀಕ್ಷೆಗಳ ಪಲಿತಾಂಶವನ್ನು ವಿಶ್ಲೇಷಿಸಿ ಗಣಿತದ ಕಲಿಕೆಗೆ ಮತ್ತಷ್ಟು ಪೂರಕ ಯೋಜನೆಯನ್ನು ರೂಪಿಸಲಾಗುತ್ತದೆ ಎಂದರು.

 


Spread the love

LEAVE A REPLY

Please enter your comment!
Please enter your name here