‘ಮ್ಯಾಕ್ಸ್’ ಟ್ರೈಲರ್ ರಿಲೀಸ್: ಕಿಚ್ಚನ ರಗಡ್ ಲುಕ್ ಗೆ ಫ್ಯಾನ್ಸ್ ಫಿದಾ

0
Spread the love

ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ಕಾಯ್ತಿದ್ದಾರೆ. ಡಿ.25ರಂದು ಸಿನಿಮಾ ರಿಲೀಸ್ ಆಗುತ್ತಿದ್ದು ಅದಕ್ಕೂ ಮುನ್ನ ಚಿತ್ರತಂಡ ಟ್ರೈಲರ್ ರಿಲೀಸ್ ಮಾಡಿದೆ. ಕೋಟೆನಾಡು ಚಿತ್ರದುರ್ಗದಲ್ಲಿ ಮ್ಯಾಕ್ಸ್ ಚಿತ್ರದ ಪ್ರೀ-ರಿಲೀಸ್​ ಇವೆಂಟ್ ಆಯೋಜಿಸಗಿತ್ತು. ಇದೇ ವೇದಿಕೆಯಲ್ಲಿ ಟ್ರೇಲರ್​ ಅನಾವರಣ ಮಾಡಲಾಗಿದೆ. ಟ್ರೇಲರ್​ನಲ್ಲಿ ಸುದೀಪ್ ಅವರ ಮಾಸ್ ಲುಕ್ ನೋಡಿ ಅಭಿಮಾನಿಗಳಿಗೆ ಫಿದಾ ಆಗಿದ್ದಾರೆ.

Advertisement

‘ಮ್ಯಾಕ್ಸ್’ ಸಿನಿಮಾಗೆ ವಿಜಯ್ ಕಾರ್ತಿಕೇಯ ಅವರು ನಿರ್ದೇಶನ ಮಾಡಿದ್ದು, ಇದು ಒಂದೇ ರಾತ್ರಿಯಲ್ಲಿ ನಡೆಯುವ ಆ್ಯಕ್ಷನ್ ಕಹಾನಿಯಾಗಿದೆ ಎಂದು ಹೇಳಲಾಗಿದೆ. ಈ ಚಿತ್ರದಲ್ಲಿ ಸುದೀಪ್ ಅವರಿಗೆ ಹೀರೋಯಿನ್ ಇಲ್ಲ. ಪಕ್ಕಾ ಆ್ಯಕ್ಷನ್​ ಬಯಸುವ ಪ್ರೇಕ್ಷಕರಿಗೆ ‘ಮ್ಯಾಕ್ಸ್’ ಸಿನಿಮಾದಲ್ಲಿ ಮನರಂಜನೆಯ ಫುಲ್ ಮೀಲ್ಸ್ ಇರಲಿದೆ ಎಂಬುದು ಟ್ರೇಲರ್​ನಲ್ಲೇ ಕಾಣಿಸುತ್ತಿದೆ. ಇನ್ನು, ಖಡಕ್ ಆದಂತಹ ಡೈಲಾಗ್​ಗಳ ಮೂಲಕವೂ ಸುದೀಪ್ ಅವರು ವಿಲನ್​ಗಳಿಗೆ ನಡುಕು ಹುಟ್ಟಿಸಿದ್ದಾರೆ.

‘ಮ್ಯಾಕ್ಸ್’ ಸಿನಿಮಾದಲ್ಲಿ ಉಗ್ರಂ ಮಂಜು, ಶರತ್ ಲೋಹಿತಾಶ್ವ, ಸುನಿಲ್, ಪ್ರಮೋದ್ ಶೆಟ್ಟಿ, ವರಲಕ್ಷ್ಮಿ ಶರತ್ ಕುಮಾರ್​, ಸುಧಾ ಬೆಳವಾಡಿ, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಳೆ ಮುಂತಾದವರು ನಟಿಸಿದ್ದಾರೆ. ಅಜನೀಶ್ ಬಿ. ಲೋಕನಾಥ್ ಅವರು ಸಂಗೀತ ನೀಡಿದ್ದಾರೆ. ಈ ಚಿತ್ರದ ಬಹುತೇಕ ಶೂಟಿಂಗ್ ಮಹಾಬಲಿಪುರಂನಲ್ಲಿ ನಡೆದಿದೆ. ಕಾಲಿವುಡ್​ನ ಖ್ಯಾತ ನಿರ್ಮಾಪಕ ಕಲೈಪುಲಿ ಎಸ್. ಧಾನು ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

ಈಗಾಗಲೇ ‘ಮ್ಯಾಕ್ಸ್’ ಸಿನಿಮಾದಿಂದ ಬಂದಿರುವ ಟೀಸರ್​ಗಳೆಲ್ಲವೂ ಧೂಳೆಬ್ಬಿಸಿವೆ. ಹಾಡುಗಳು ಕೂಡ ಸದ್ದು ಮಾಡಿವೆ. ಇದೀಗ ಟ್ರೇಲರ್​ ಟ್ರೆಂಡ್​ ಆಗುತ್ತಿದೆ. ‘ವಿಕ್ರಾಂತ್ ರೋಣ’ ಬಳಿಕ ಸುದೀಪ್ ನಟಿಸಿದ ಸಿನಿಮಾ ಇದು. ಸಾಕಷ್ಟು ಸಮಯದ ಬಳಿಕ ಸುದೀಪ್ ನಟನೆಯ ಸಿನಿಮಾ ರಿಲೀಸ್ ಆಗುತ್ತಿದ್ದು ಅಭಿಮಾನಿಗಳು ತುದಿಗಾಲಲ್ಲಿ ನಿಂತು ಸಿನಿಮಾಗಾಗಿ ಕಾಯ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here