ಬೆಂಗಳೂರು: ಭಗವಂತ ನನಗೆಷ್ಟು ಆಯಸ್ಸು ಕೊಟ್ಟಿದ್ದಾನೋ ಅಷ್ಟೂ ಶಿವಣ್ಣನಿಗೆ ಕೊಡಲಿ ಎಂದು ನಟ ಧ್ರುವ ಸರ್ಜಾ ಹೇಳಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವಣ್ಣನಿಗೆ ಇಂದು ಸರ್ಜರಿ ನಡೆಯಲಿದೆ. ಅನಾರೋಗ್ಯದ ಹಿನ್ನೆಲೆ ಸರ್ಜರಿಗಾಗಿ ಅಮೇರಿಕಾ ಹೋಗಿರುವ ಶಿವಣ್ಣ ಅವರಿಗಾಗಿ ಅಭಿಮಾನಿಗಳು ಪ್ರಾರ್ಥಿಸಿದ್ದಾರೆ. ಇದರ ಬೆನ್ನಲ್ಲೇ ಈ ಕುರಿತು ಮಾತನಾಡಿರುವ ನಟ,
Advertisement
ಆ ಭಗವಂತ ನನಗೆಷ್ಟು ಆಯಸ್ಸು ಕೊಟ್ಟಿದ್ದಾನೋ ಅಷ್ಟೂ ಅವರಿಗೆ ಕೊಡಲಿ ಎಂದಿದ್ದಾರೆ. ಅವರು ನಮ್ಮ ಇಂಡಸ್ಟ್ರಿಗೆ ಗಾಡ್ ಫಾದರ್, ಅವರ ಆರೋಗ್ಯ ಸುಧಾರಿಸಲಿ ಎಂದು ಹೇಳಿದ್ದಾರೆ.
ಇದೇ ವೇಳೆ ಡೈರೆಕ್ಟರ್ ಪ್ರೇಮ್ ಮಾತನಾಡಿ, ಯುಎಸ್‌ನಲ್ಲಿ ಶಿವಣ್ಣನ ಆಪರೇಷನ್ ಇದೆ. ಅವರಿಗೆ ಒಳ್ಳೆಯದಾಗಲಿ. ಅವರು ಮತ್ತೆ ಎನರ್ಜಿಟಿಕ್ ಆಗಿ ಬರಬೇಕು ಎಂದಿದ್ದಾರೆ. ಇದೇ ವೇಳೆ ದರ್ಶನ್ ಜೊತೆಗಿನ ಸಿನಿಮಾ ಕುರಿತು ಮಾತನಾಡಿ, ಅವರೊಂದಿಗೆ ಸಿನಿಮಾ ಮಾಡೇ ಮಾಡ್ತೀನಿ. ಅದರಲ್ಲೇನು ಡೌಟ್ ಇಲ್ಲ ಎಂದರು.