ಈ ಬಾರಿ ಫೈನಲ್’ನಲ್ಲಿ RCB ಆಟಗಾರರಿಗೆ ದೇವರು ಶಕ್ತಿ ಕೊಡಲಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

0
Spread the love

ಬೆಂಗಳೂರು: ನಾಳಿನ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ವಿರುದ್ಧ RCB ಗೆದ್ರೆ ಸಂಭ್ರಮಾಚರಣೆ ಮಾಡಲು RCB ಫ್ಯಾನ್ಸ್ ಸಜ್ಜಾಗಿದ್ದಾರೆ. ಬೆಂಗಳೂರಲ್ಲಿ RCB ಕಪ್ ಗೆದ್ರೆ ಭರ್ಜರಿಯಾಗಿ ಸೆಲಬ್ರೇಟ್ ಮಾಡಲು ಸಿದ್ಧತೆಗಳು ಜೋರಾಗಿದೆ.

Advertisement

ಇನ್ನೂ ಈ ವಿಚಾರವಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಾನು ಕಿಕ್ರೆಟ್‌ನ ದೊಡ್ಡ ಅಭಿಮಾನಿ. ಈ ಬಾರಿ ಫೈನಲ್‌ನಲ್ಲಿ ಆರ್‌ಸಿಬಿ ಆಟಗಾರರಿಗೆ ದೇವರು ಶಕ್ತಿ ಕೊಡಲಿ ಎಂದು ಪ್ರಾರ್ಥನೆ ಮಾಡ್ತೇನೆ ಎಂದರು.

ಈ ಐಪಿಎಲ್ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲರೂ ತುಂಬಾ ಚೆನ್ನಾಗಿ ಆಡಿದ್ದಾರೆ. ಆರ್‌ಸಿಬಿ ಗೆಲ್ಲಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ನಾನು ವಿಶೇಷ ಪ್ರಾರ್ಥನೆ ಮಾಡುತ್ತೇನೆ. ಆರ್‌ಸಿಬಿ ಒಂದಲ್ಲ ಎರಡಲ್ಲ, ನಾಲ್ಕು ಬಾರಿ ಫೈನಲ್‌ಗೆ ಬಂದಿದೆ. ಆದರೆ ಈ ಬಾರಿ `ಕಪ್ ನಮ್ದೇ’ ಎಂದು ಹೇಳಿ ಆರ್‌ಸಿಬಿ ಫ್ಯಾನ್‌ಗಳನ್ನು ಹುರಿದುಂಬಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here