ಮಹಾನ್ ನಾಯಕರ ಜಯಂತಿ ಅರ್ಥಪೂರ್ಣವಾಗಿರಲಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಎಪ್ರಿಲ್ 14ರಂದು ಡಾ. ಬಿ.ಆರ್. ಅಂಬೇಡ್ಕರರ 134ನೇ ಹಾಗೂ ಬಾಬು ಜಗಜೀವನ್‌ರಾಮ್‌ರ 118ನೇ ಜಯಂತಿಯನ್ನು ಸಂಪನ್ಮೂಲ ವ್ಯಕ್ತಿಗಳನ್ನೊಳಗೊಂಡ ವಿಚಾರ ಸಂಕೀರ್ಣದ ಮೂಲಕ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ತಹಸೀಲ್ದಾರ ವಾಸುದೇವಸ್ವಾಮಿ ಹೇಳಿದರು.

Advertisement

ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ತಾಲೂಕಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಮಹಾನ್ ನಾಯಕರ ಜಯಂತಿಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸಭೆಯಲ್ಲಿ ಮಾತನಾಡಿದ ಸುರೇಶ ನಂದೆಣ್ಣವರ, ಕೋಟೆಪ್ಪ ವರದಿ, ಗಂಗಾಧರ ಮೆನಸಿನಕಾಯಿ, ಕೇವಲ ಮಹಾನ್ ನಾಯಕರ ಭಾವಚಿತ್ರದ ಪೂಜೆ, ಮೆರವಣಿಗೆ ಮಾಡುವುದಕ್ಕಿಂತ ಡಾ. ಅಂಬೇಡ್ಕರ್, ಜಗಜೀವನ್‌ರಾಮ್ ಅವರ ವಿಚಾರಧಾರೆಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನವನ್ನು ಮಾಡಬೇಕು. ಲಕ್ಷ್ಮೇಶ್ವರವು ಹೊಸ ತಾಲೂಕಾಗಿದೆ. ಲಕ್ಷ್ಮೇಶ್ವರ ತಾಲೂಕಿನಲ್ಲಿಯೇ ಈ ಬಾರಿ ಮಹಾನ್ ನಾಯಕರ ಜಯಂತಿ ಆಚರಿಸುವ ಬಗ್ಗೆ ಎಲ್ಲಾ ಸಮಾಜದ ಮುಖಂಡರು ತಿರ್ಮಾನ ಮಾಡಿ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದರು.

ಮಹಾನ್ ನಾಯಕರೀರ್ವರ ಜಯಂತಿಯನ್ನು ಹೇಗೆ ಆಚರಣೆ ಮಾಡಬೇಕು ಎಂಬುದರ ಕುರಿತು ಶಿರಹಟ್ಟಿ- ಲಕ್ಷ್ಮೇಶ್ವರ ತಾಲೂಕಿನವರು ತೀರ್ಮಾನ ಕೈಗೊಳ್ಳುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ದಲಿತ ಮುಖಂಡರ ಸಮಿತಿಯನ್ನು ರಚಿಸಿ, ಸಮಿತಿ ಕೈಗೊಳ್ಳುವ ತೀರ್ಮಾನದಂತೆ ಜಯಂತಿಯನ್ನು ಆಚರಿಸೋಣ ಎಂದು ತಾ.ಪಂ ಇಓ ಕೃಷ್ಣಪ್ಪ ಧರ್ಮರ ಮತ್ತು ಸಮಾಜ ಕಲ್ಯಾಣ ಇಲಾಖೆಯ ಎಡಿ ಗೋಪಾಲ ಲಮಾಣಿ ಹೇಳಿದರು.

ಈ ವೇಳೆ ಫಕ್ಕೀರೇಶ ಮ್ಯಾಟನ್ನವರ, ಫಕ್ಕೀರೇಶ ನಂದೆಣ್ಣವರ, ರಮೇಶ ಹಂಗನಕಟ್ಟಿ, ರಮೇಶ ಅಡಗಿಮನಿ, ರಾಮು ಗಡದವರ, ಸದಾನಂದ ನಂದೆಣ್ಣವರ, ಜಗದೀಶ ಹುಲಮ್ಮನ್ನವರ, ಸಂತೋಷ ಹಾದಿಮನಿ, ಚಂದ್ರು ತಳವಾರ, ವಿನೋದ ಶಿರಹಟ್ಟಿ, ದೇವಪ್ಪ ನಂದೇಣ್ಣವರ, ಆನಂದ ತಳಗೇರಿ, ಕೆ.ಓ. ಹುಲಿಕಟ್ಟಿ, ರಾಜು ಕಮತದ, ಅನಿಲ ಮುಳಗುಂದ, ನಾಗರಾಜ ದೊಡ್ಡಮನಿ ಹಾಗೂ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಇದ್ದರು.


Spread the love

LEAVE A REPLY

Please enter your comment!
Please enter your name here