ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪ್ರತಿಯೊಂದು ಮಗುವು ತನ್ನದೇ ಆದ ವಿಶೇಷತೆಯನ್ನು ಹೊಂದಿರುತ್ತದೆ. ಆ ಮಗುವಿನಲ್ಲಿರುವ ವಿಶೇಷತೆಯನ್ನು ಗುರುತಿಸಿ, ವೇದಿಕೆ ಒದಗಿಸಿ, ಪ್ರತಿಭೆ ಅನಾವರಣ ಮಾಡುವುದು ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಂತಹ ಕಾರ್ಯಕ್ರಮಗಳು. ಇವುಗಳು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರುತ್ತವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯ್ಕ ಅಭಿಪ್ರಾಯಪಟ್ಟರು.
ಅವರು ಲಕ್ಷ್ಮೇಶ್ವರದ ಫೀನಿಕ್ಸ್ ಸ್ಕೂಲ್‌ನಲ್ಲಿ ಹಮ್ಮಿಕೊಂಡಿದ್ದ ಲಕ್ಷ್ಮೇಶ್ವರ ಉತ್ತರ ವಲಯದ ಪ್ರತಿಭಾ ಕಾರಂಜಿ ಹಾಗೂ ಲಕ್ಷ್ಮೇಶ್ವರ ಉತ್ತರ ಮತ್ತು ಮಾಗಡಿ ಕ್ಲಸ್ಟರ್ ಮಟ್ಟದ ಕಲೋತ್ಸವ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಹರ್ಲಾಪುರ, ಪ್ರತಿವರ್ಷ ಈ ಭಾಗದ ಮಕ್ಕಳು ತಾಲೂಕು, ಜಿಲ್ಲೆ, ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ತೋರುತ್ತಿದ್ದಾರೆ. ಅವರಿಗೆ ನಾವೆಲ್ಲ ಪ್ರೇರಣೆ ತುಂಬಿ ಪ್ರೋತ್ಸಾಹಿಸಬೇಕಾಗಿದೆ ಎಂದರು.
ಆನಂದ ಮುಳಗುಂದ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಬಿ. ಕೊಣ್ಣೂರ ವಹಿಸಿದ್ದರು. ಬಿಆರ್‌ಪಿ ಈಶ್ವರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಫೀನಿಕ್ಸ್ ಸಂಸ್ಥೆಯ ಆಡಳಿತ ಮಂಡಳಿಯ ರಾಜಶೇಖರ ಹಾಲೇವಾಡಿಮಠ, ಶಿವಯೋಗಿ ಗಾಂಜಿ, ವಿಜಯ ಹತ್ತಿಕಾಳ, ಚಂದ್ರು ಕಗ್ಗಲಗೌಡರ, ಸುನಿತಾ ಯರ್ಲಗಟ್ಟಿ, ಕವಿತಾ ಮೆಣಸಗಿ, ಮಂಗಳಾ ಹುಲಮನಿ, ಬಿ.ಸಿ. ಪಟ್ಟೇದ, ಎಚ್.ಎಂ. ಗುತ್ತಲ, ಚಂದ್ರು ನೇಕಾರ, ಸಂಗಮೇಶ ಅಂಗಡಿ, ಎಸ್.ಡಿ. ಲಮಾಣಿ, ಎ.ಎಂ. ಅಕ್ಕಿ, ಬಿ.ಬಿ. ಯತ್ತಿನಹಳ್ಳಿ, ಡಿ.ಡಿ. ಲಮಾಣಿ, ಎಲ್.ಎನ್. ನಂದೆಣ್ಣವರ, ಗೀತಾ ಹಳ್ಯಾಳ, ಎಂ.ಎ. ನದಾಫ್, ಎಂ.ಡಿ. ವಾರದ, ಬಿ.ಎಂ. ಯರಗುಪ್ಪಿ, ಎ.ಎಂ. ಛತ್ರದ, ಗಿರೀಶ ಸುಗಜಾನವರ, ಬಿ.ಎಂ. ಕುಂಬಾರ, ಎಸ್.ಸಿ. ಗೋಲಪ್ಪನವರ, ಎಸ್.ಜಿ. ಇಟಗಿ, ಜಿ.ಎನ್. ಮೆಳ್ಳಳ್ಳಿ, ಸಿಆರ್‌ಪಿ ಗಿರೀಶ ನೇಕಾರ, ಜ್ಯೋತಿ ಗಾಯಕವಾಡ, ಕೆ.ಪಿ. ಕಂಬಳಿ, ನವೀನ ಅಂಗಡಿ, ಶಿವಾನಂದ ಅಸುಂಡಿ, ಸಿ.ವಿ. ವಡಕಣ್ಣವರ, ಎನ್.ಎನ್. ಸಾವಿರಕುರಿ, ಎಸ್.ಎಚ್. ಮತ್ತೂರ ಉಪಸ್ಥಿತರಿದ್ದರು.
ಶಾಂಭವಿ ಅಕ್ಕೂರ, ಉಮೇಶ ನೇಕಾರ, ಎಲ್.ಎಂ. ಹುರಳಿಕುಪ್ಪಿ, ಎನ್.ಎಸ್. ಬಂಕಾಪುರ, ಎಚ್.ಡಿ. ನಿಂಗರೆಡ್ಡಿ, ಎನ್.ಎನ್. ಶಿಗ್ಲಿ ನಿರ್ವಹಿಸಿದರು. 15 ಶಾಲೆಗಳ ಸುಮಾರು 400 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿವಿಧ ಕ್ಲಸ್ಟರ್‌ನ ಶಿಕ್ಷಕರು ನಿರ್ಣಾಯಕರಾಗಿ ಭಾಗವಹಿಸಿದ್ದರು.
ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಎಸ್.ಕೆ. ಹವಾಲ್ದಾರ ಮಾತನಾಡಿ, ಶಿಕ್ಷಣದ ಮುಖ್ಯ ಉದ್ದೇಶ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ. ಇದು ಸಾಧಿತವಾಗಬೇಕಾದರೆ ಕಲೆ, ಸಂಸ್ಕೃತಿ, ಸಾಹಿತ್ಯ ಎಲ್ಲವುಗಳಲ್ಲಿಯೂ ಕೂಡ ಮಗು ವಿಕಸನ ಹೊಂದುವುದು ಮುಖ್ಯ ಎಂದರು.



