ವಿಜಯಸಾಕ್ಷಿ ಸುದ್ದಿ, ಡಂಬಳ: ಭಾರತ ದೇಶದ ಇತಿಹಾಸದ ಇತಿಹಾಸಕಾರರು ಬರೆದಿರುವ ಪುಟಗಳನ್ನು ತಿರುವಿ ಹಾಕಿದಾಗ ಭಾರತ ಹಿಂದೂ ರಾಷ್ಟ್ರ, ಹಿಂದೂಸ್ಥಾನ ಎಂದು ಕರೆಸಿಕೊಂಡಿದೆ. ಹೀಗಾಗಿ ಹಿಂದು ಮತ ವಾಚಕವಲ್ಲ, ಧರ್ಮ ವಾಚಕವಲ್ಲ, ರಾಷ್ಟ್ರ ವಾಚಕ, ರಾಷ್ಟ್ರ ಸೂಚಕವಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆ ಕ್ಷೇತ್ರೀಯ ಸಂಯೋಜಕರಾದ ಜಗದೀಶ ಕಾರಂತ ಹೇಳಿದರು.
ಡಂಬಳ ಗ್ರಾಮದ ಜಗದ್ಗುರು ತೋಂಟದಾರ್ಯ ಕಲ್ಯಾಣ ಮಂಟಪದ ಆವರಣದಲ್ಲಿ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿಯಿಂದ ಹಮ್ಮಿಕೊಂಡಿದ್ದ ಹಿಂದೂ ಸಮ್ಮೇಳನದಲ್ಲಿ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಅವರು ಮಾತನಾಡಿದರು.
ಧಾರವಾಡ ವಿಭಾಗದಲ್ಲಿ ಪ್ರಥಮವಾಗಿ ಡಂಬಳದಲ್ಲಿ ಹಿಂದೂ ಸಮ್ಮೇಳನ ನಡೆಸಲಾಗಿದೆ. ನಮ್ಮ ವಿರೋಧ ಇರುವುದು ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದು ನೆಲೆಸಿರುವ ಮುಸ್ಲಿಮರ ಬಗ್ಗೆ, ಅವರು ಮರಳಿ ಅವರ ದೇಶಕ್ಕೆ ಹೋಗಬೇಕು ಎನ್ನುವುದು. ಆರ್‌ಎಸ್‌ಎಸ್ ಗುರುತಿಸುವುದಕ್ಕಿಂತ ಮುಂಚೆ ಭಾರತವನ್ನು ಜಗತ್ತು ಗುರುತಿಸಿರುವುದು ಹಿಂದೂ ಎಂದು. ದೇಶದ ಎಲ್ಲಾ ಜಮಾತೆ ಇಸ್ಲಾಂ ಸಂಘಟನೆಗಳು ತಮ್ಮ ಸಂಘಟನೆಗಳನ್ನು ಹೆಸರಿಸುವುದು ಜಮಾತೆ ಇಸ್ಲಾಂ ಹಿಂದ್ ಎಂದು. ಆರ್.ಎಸ್.ಎಸ್ ಸಾವಿರಾರು ಹಿಂದೂ ಸಮ್ಮೇಳನ ನಡೆಸುವ ಗುರಿ ಹೊಂದಿದ್ದು, ಆರ್‌ಎಸ್‌ಎಸ್ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ದೇಶದ ರಕ್ಷಣೆಗಾಗಿ ಜಾತಿ-ಮತ ಮೀರಿ ಒಂದಾಗಿ ನಡೆಯಬೇಕು. ಸಮಾಜದಲ್ಲಿ ಸಮರಸವಾಗಿ ಬಾಳುವುದನ್ನು ಕಲಿಸುವುದರೊಂದಿಗೆ ದೇಶ ಎದುರಿಸಬಹುದಾದ ಅನೇಕ ಸವಾಲುಗಳನ್ನು ಮೆಟ್ಟಿ ನಿಲ್ಲುವಂತಾಗಬೇಕು ಎಂದು ಹೇಳಿದರು.
ಸಂಜೀವ ರಿತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾರುತಿ ದೇವಸ್ಥಾನದಿಂದ ವಿವಿಧ ವಾದ್ಯಮೇಳದೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಭಾರತಾಂಬೆಯ ಭಾವಚಿತ್ರದೊಂದಿಗೆ ಶೋಭಾಯಾತ್ರೆ ಜರುಗಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಳಕಪ್ಪ ಬಂಡಿ, ಡಂಬಳ ಮಂಡಳ ಅಧ್ಯಕ್ಷ ಅಂದಪ್ಪ ಹಾರೂಗೇರಿ, ಹಿಂದೂ ಸಮ್ಮೇಳನದ ಅಧ್ಯಕ್ಷ ಮಲ್ಲೇಶ ಮಠದ, ಉಪಾಧ್ಯಕ್ಷ ಹನುಮಪ್ಪ ಹಾದಿಮನಿ, ಬಾಬು ರಾಠೋಡ, ಡಿ. ಪ್ರಸಾದ, ಮಂಜುನಾಥ ಇಟಗಿ, ರವಿ ಕರಿಗಾರ, ನಾಗರಾಜ ಕಾಟ್ರಳ್ಳಿ, ಈಶ್ವರಗೌಡ ಪಾಟೀಲ, ಸಮಿತಿಯ ಪ್ರಮುಖರಾದ ಬೀರಪ್ಪ ಬಂಡಿ, ವೆಂಕನಗೌಡ ಪಾಟೀಲ್, ಮುದಿಲಿಂಗಪ್ಪ ಕೊರ್ಲಹಳ್ಳಿ, ನಾಗರಾಜ ಕಾಟ್ರಳ್ಳಿ, ಈಶ್ವರಗೌಡ, ಕುಬೇರಪ್ಪ ಬಂಡಿ, ಕೃಷ್ಣ ಬಂಡಿ, ಪ್ರಭು ಕರಮುಡಿ, ದೇವಪ್ಪ ಇಟಗಿ, ಕೃಷ್ಣಾ ಬಂಡಿ, ಶರಣಪ್ಪ ಕೊಂಬಳಿ, ಮಹಾದೇವಪ್ಪ ತೋಟಪ್ಪನವರ, ಬಸವರಾಜ ಚನ್ನಳ್ಳಿ, ಪಕ್ಕಣನಗೌಡರ ರಡ್ಡೆರ, ರಮೇಶ ತುರಕಾಣಿ, ಪ್ರಕಾಶ ಕೋಂತಬ್ರಿ, ಶಿವಾನಂದ ಬಂಡಿ, ಹನಮಂತ ಪೂಜಾರ, ಪಾಂಡಪ್ಪ ರಾಠೋಡ, ಲಕ್ಷ್ಮಣ ರಾಠೋಡ, ಬಸವಂತಪ್ಪ ಬಡಿಗೇರ, ಬಾಬಣ್ಣ ರಾಠೋಡ, ಸಿದ್ಧನಗೌಡ ಪಾಟೀಲ, ನಿಂಗಣಗೌಡ ಹರ್ತಿ, ಮಂಜುನಾಥ ರಾಮೇನಳ್ಳಿ, ಈಶಪ್ಪ ರಂಗಪ್ಪನವರ, ಮಿತ್ತಯ್ಯಜ್ಜ ಹರ್ತಿಮಠ, ಕೃಷ್ಣಪ್ಪ ನಗರ, ದೇವಪ್ಪ ಕಲಿವಾಳ, ವಾಸುದೇವ ಪಾಟೀಲ, ಮುದಕಪ್ಪ ಮುಳಗುಂದ, ಮುತ್ತು ಚಿನ್ನಪ್ಪಗೌಡರ, ಮಂಜುನಾಥ ಇಟಗಿ, ರವಿ ಕರಿಗಾರ, ಮುತ್ತು ಚಿನ್ನಪ್ಪಗೌಡರ, ಸೋಮಶೇಖರಯ್ಯ ಹಿರೇಮಠ, ಲಕ್ಷ್ಮಣ ಬೂದಿಹಾಳ, ಯಲ್ಲಪ್ಪ ಮುದಗಣ್ಣನವರ, ಸಂಭು ಸಂದಿಗೌಡ ಮುಂತಾದವರಿದ್ದರು.
ಹರ್ಲಾಪೂರದ ಡಾ. ಅಭಿನವ ಕೊಟ್ಟೂರೇಶ್ವರ ಮಹಾ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಒಂದು ಸಮಾಜ ಎಂಬುದು ದ್ವಾರಬಾಗಿಲು ಇದ್ದಂತೆ. ಜಾತಿ-ಮತ ಇಲ್ಲದೆ ಹಿಂದೂಗಳು ನಾವೆಲ್ಲ ಬಂಧುಗಳು ಎಂಬ ಭಾವನೆಯಿಂದ ಹೊರಟು ಎಲ್ಲವನ್ನು ಅಪ್ಪಿಕೊಳ್ಳುವ ಸಮಾಜವಾಗಿದೆ. ಜಾತ್ಯಾತೀತವಾಗಿ ಎಲ್ಲರೂ ಧೈರ್ಯದಿಂದ ಹಿಂದೂಗಳು ಎನ್ನುವುದು ಅಗತ್ಯವಿದೆ. ಇದು ಭ್ರಾತೃತ್ವ ತೋರಿಸುತ್ತದೆ ಎಂದು ಹೇಳಿದರು.



