ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕಳೆದ ಎರಡು-ಮೂರು ದಿನಗಳಿಂದ ನೀವು ನಡೆಸುತ್ತಿರುವ ಹೋರಾಟ ಗಮನಕ್ಕೆ ಬಂದಿದೆ. ನಿಮ್ಮ ನ್ಯಾಯಯುತವಾದ ಹೋರಾಟಕ್ಕೆ ನಾನು ಸಕಾರಾತ್ಮಕವಾಗಿ ಸ್ಪಂದಿಸುತ್ತೇನೆ ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿರುವ ಪೌರ ಕಾರ್ಮಿಕರ ಶಿಬಿರಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.
ನಿಮ್ಮ ಎಲ್ಲ ಬೇಡಿಕೆಗಳನ್ನು ಸರಕಾರ ಶೀಘ್ರವೇ ಪರಿಹರಿಸಿ ನಿಮ್ಮ ಜೀವನಕ್ಕೆ ನೆಮ್ಮದಿ ನೀಡುತ್ತದೆ ಎಂದು ನಾನು ಆಶಿಸುತ್ತೇನೆ. ಈ ದಿಶೆಯಲ್ಲಿ ನಾನೂ ಸಹ ಸರಕಾರದ ಗಮನಕ್ಕೆ ತಂದು ಅವುಗಳು ಬೇಗನೆ ಈಡೇರುವಂತೆ ಮಾಡುವಲ್ಲಿ ಶ್ರಮಿಸುತ್ತೇನೆ. ಪೌರ ಕಾರ್ಮಿಕರು ಪಟ್ಟಣದ ಸ್ವಚ್ಛತೆಯ ಜೊತೆಗೆ ಎಲ್ಲರಿಗೂ ಹಲವು ಸೇವೆಗಳನ್ನು ಒದಗಿಸಿ ಪಟ್ಟಣದ ಸೌಂದರ್ಯವನ್ನು ಕಾಪಾಡುತ್ತಿದ್ದೀರಿ. ಅಲ್ಲದೆ ಜನತೆ ನೆಮ್ಮದಿಯಿಂದ ಬದುಕಲು ಎಲ್ಲ ರೀತಿಯ ಅನುಕೂಲವನ್ನೂ ಮಾಡುತ್ತಿದ್ದೀರಿ. ಹೀಗಾಗಿ ನಿಮ್ಮ ಬೇಡಿಕೆಗಳು ಬೇಗನೆ ಈಡೇರಬೇಕೆಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ಧುರೀಣರಾದ ಐ.ಎಸ್. ಪಾಟೀಲ, ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಸ್ಥಾಯಿ ಸಮಿತಿ ಅಧ್ಯಕ್ಷ ಮುತ್ತಪ್ಪ ನೂಲ್ಕಿ, ಸದಸ್ಯರು, ಪೌರಸೇವಾ ನೌಕರರ ಸಂಘದ ಜಿಲ್ಲಾಧ್ಯಕ್ಷ ರಮೇಶ ಹಲಗಿಯವರ, ಘಟಕದ ಅಧ್ಯಕ್ಷ ನೀಲಪ್ಪ ಚಳ್ಳಮರದ, ಅಲ್ಲಾಭಕ್ಷಿ ನದಾಫ್, ಮೈಲಾರಪ್ಪ ಚಳ್ಳಮರದ, ಹೋರಾಟಗಾರರು ಉಪಸ್ಥಿತರಿದ್ದರು.