ಬೆಂಗಳೂರು:- ಬೆಂಗಳೂರಿನ ಸುಬ್ರಹ್ಮಣ್ಯ ನಗರದ ಮಿಲ್ಕ್ ಕಾಲೋನಿಯಲ್ಲಿ ಕೊಳೆತ ಸ್ಥಿತಿಯಲ್ಲಿ ದಾವಣಗೆರೆ ಮೂಲದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜರುಗಿದೆ.
Advertisement
25 ವರ್ಷದ ಸುಪ್ರಿಯಾ ಮೃತ ಯುವತಿ. ಎಂಬಿಎ ವ್ಯಾಸಂಗ ಮಾಡುತ್ತಿದ್ದ ಸುಪ್ರಿಯಾ ಬೈಕ್ ತರಬೇತಿ ಕೂಡ ಪಡೆಯುತ್ತಿದ್ದಳು. ಕಳೆದ 2 ವರ್ಷ 8 ತಿಂಗಳಿಂದ ಮಿಲ್ಕ್ ಕಾಲೋನಿಯ 3ನೇ ಮಹಡಿಯ ಬಾಡಿಗೆ ಮನೆಯಲ್ಲಿ ವಾಸವಿದ್ದಳು.
ಕಳೆದ ಎರಡು ದಿನಗಳಿಂದ ಮನೆ ಬಾಗಿಲು ಬಂದ್ ಆಗಿದ್ದ ಕಾರಣ ಅನುಮಾನಗೊಂಡ ಮನೆಮಾಲೀಕರು ಬಾಗಿಲು ತೆರೆದು ನೋಡಿದಾಗ, ಫ್ಯಾನ್‌ಗೆ ನೇಣು ಬಿಗಿದು ತುಂಡಾಗಿ ಬಿದ್ದ ಸ್ಥಿತಿಯಲ್ಲಿ ಕೊಳೆತ ಶವ ಪತ್ತೆಯಾಗಿದೆ.
ಘಟನೆಯ ಮಾಹಿತಿ ಸಿಕ್ಕ ತಕ್ಷಣ ಸುಬ್ರಹ್ಮಣ್ಯನಗರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಪೊಲೀಸರು ಯುಡಿಆರ್ ದಾಖಲಿಸಿಕೊಂಡಿದ್ದು, ಪ್ರಕರಣದ ಕುರಿತು ಮುಂದಿನ ತನಿಖೆ ನಡೆಯುತ್ತಿದೆ.


