ವಿಜಯಸಾಕ್ಷಿ ಸುದ್ದಿ, ಗದಗ : ಹುಲಕೋಟಿಯ ರೂರಲ್ ಮೆಡಿಕಲ್ ಸರ್ವಿಸ್ ಸೊಸೈಟಿಯ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಹುಲಕೋಟಿಯಲ್ಲಿ 5ನೇ ಬ್ಯಾಚ್‌ನ ಪ್ರಥಮ ಸೆಮಿಸ್ಟರ್‌ನ Bsc ನರ್ಸಿಂಗ್ ಮತ್ತು 4ನೇ ಬ್ಯಾಚಿನ ಪ್ರಥಮ ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳ ಕೋರ್ಸ್ ಓರಿಯೆಂಟೇಷನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆರ್‌ಎಮ್‌ಎಸ್‌ಎಸ್ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸಸ್‌ನ ಪ್ರಾಂಶುಪಾಲರಾದ ಡಾ. ಭಾವನಾ ಕೋನಾ ಪಾಲ್ಗೊಂಡಿದ್ದರು. ಅಧ್ಯಕ್ಷತೆಯನ್ನು ಆರ್‌ಎಮ್‌ಎಸ್‌ಎಸ್ ಇನ್ಸ್ಟಿಟ್ಯೂಟ್‌ನ ಅಧ್ಯಕ್ಷ ಡಾ. ಎಸ್.ಆರ್. ನಾಗನೂರ ವಹಿಸಿದ್ದರು. ಡಾ. ವೆಮನ್ ಸಾವಕಾರ್, ಪ್ರಾಂಶುಪಾಲ ಬಸಯ್ಯ ಹಿರೇಮಠ ವೇದಿಕೆಯಲ್ಲಿದ್ದರು.
ಸಭಾ ಕಾರ್ಯಕ್ರಮದ ನಂತರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಪ್ರಾಂಶುಪಾಲ ಬಸಯ್ಯ ಹಿರೇಮಠ ಹಾಗೂ ಸಹ ಪ್ರಾಧ್ಯಾಪಕಿ ಕುಸುಮಾ ವಿದ್ಯಾರ್ಥಿಗಳಿಗೆ ಐಎನ್‌ಸಿಯಿಂದ ಪರಿಷ್ಕರಿಸಲ್ಪಟ್ಟ ಪಠ್ಯ ವಿಷಯದ ಗ್ರೇಡ್ ಮತ್ತು ಕ್ರೆಡಿಟ್ ವ್ಯವಸ್ಥೆಯನ್ನು ವಿವರಿಸಿದರು. ಇನ್ನೋರ್ವ ಸಹ ಪ್ರಾಧ್ಯಾಪಕಿ ಸುಮಾ ಪ್ರತಿ ವಿಷಯದ ಇಂಟರ್ನಲ್ ಅಸೆಸ್ಮೆಂಟ್ ಹಾಗೂ ವಿದ್ಯಾರ್ಥಿಗಳಿಗೆ ಬದಲಾದ ವಿಷಯಗಳ ಕುರಿತು ಗೊಂದಲಗಳನ್ನು ಪರಿಹರಿಸಿದರು.