ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕ್ರಮಗಳ ಬಗ್ಗೆ ಸಭೆ ಮಾಡಲಾಗಿದೆ: ಸಚಿವ ಡಾ. ಜಿ ಪರಮೇಶ್ವರ್

0
Spread the love

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕ್ರಮಗಳ ಬಗ್ಗೆ ಸಭೆ ಮಾಡಲಾಗಿದೆ ಎಂದು  ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕ್ರಮಗಳ ಬಗ್ಗೆ ಸಭೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಮಾಡಲಾಗಿದೆ. ಸಭೆಯಲ್ಲಿ ತುರ್ತು ಕ್ರಮಗಳ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಹೇಳಿದರು.

Advertisement

ನಾವು ಸರ್ಕಾರಕ್ಕೆ ಎಎನ್‌ಎಫ್ ರೀತಿ ಮಾಡಬೇಕು ಹೇಳಿದ್ದೇವೆ. ಅದನ್ನು ಇವತ್ತು ಪ್ರಸ್ತಾವನೆ ಮಾಡಿ‌ ಕಳುಹಿಸಿದ್ದಾರೆ. ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿ ತೀರ್ಮಾನಕ್ಕೆ ಬರುತ್ತೇವೆ. ಎರಡು ಮೂರು ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಇನ್ನೂ ಟ್ರಂಪ್ ಅವರ ಕದನ ವಿರಾಮದ ಬಗ್ಗೆ ಅನೌನ್ಸ್ ಬಗ್ಗೆ ಟ್ವೀಟ್ ಬಂತು. ಆದರೆ ನಮ್ಮ ರಕ್ಷಣಾ ಸಚಿವರಿಂದ ಸ್ಪಷ್ಟನೆ ಬಂದಿಲ್ಲ. ಕಾದು ನೋಡೋಣ ಅಂತಾ ಸುಮ್ಮನೆ ಆದೆವು. ಆ ಮೇಲೆ ಐದು ನಿಮಿಷಕ್ಕೆ ಅಧಿಕೃತವಾಗಿ ಪ್ರಕಟವಾಯ್ತು. ಇದು ದೇಶದ ರಕ್ಷಣೆಯ ಪ್ರಶ್ನೆ. ಏನೇ ಆದರೂ ಪ್ರಧಾನ ಮಂತ್ರಿಗಳಿಗೆ ಗೊತ್ತಿರುತ್ತದೆ. ಅವರೇ ಎಲ್ಲವನ್ನೂ ತಿಳಿಸಬೇಕು ಎಂದು ಒತ್ತಾಯಿಸಿದರು.


Spread the love

LEAVE A REPLY

Please enter your comment!
Please enter your name here