ಲಾರಿ ಮಾಲೀಕರ, ಸಾಗಾಣಿಕೆದಾರರ ಸಂಘದ ಸಭೆ

0
Meeting of Lorry Owners and Transporters Association
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಲಾರಿ ಮಾಲೀಕರ ಮತ್ತು ಸಾಗಾಣಿಕೆದಾರರ ವಿವಿಧೋದ್ದೇಶಗಳ ಸಹಕಾರ ಸಂಘ ನಿಯಮಿತ, ಗದಗದ 23ನೇ ವಾರ್ಷಿಕ ಸರ್ವ ಸದಸ್ಯರ ಸಭೆಯು ಶ್ರೀ ಜಗದ್ಗುರು ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಅಧ್ಯಕ್ಷರಾದ ಬಸವರಾಜ ಸಿ.ಅಬ್ಬಿಗೇರಿ ಅಧ್ಯಕ್ಷತೆಯಲ್ಲಿ ಜರುಗಿತು.

Advertisement

ಇತ್ತೀಚೆಗೆ ನಿಧನ ಹೊಂದಿದ ಸಂಘದ ಅಧ್ಯಕ್ಷ ರಮೇಶ ಕೆ.ಅಬ್ಬಿಗೇರಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ನಿರ್ದೇಶಕ ರಾಮನಾಥಸಾ ಎನ್.ಧರ್ಮದಾಸ 2023-24ನೇ ಸಾಲಿನ ವಾರ್ಷಿಕ ವರದಿ ಹಾಗೂ ಲಾಭ-ಹಾನಿ ಮತ್ತು ಆಢಾವೆ ಪತ್ರಿಕೆಯನ್ನು ಸಾದರಪಡಿಸಿದರು.

ನಿರ್ದೇಶಕರಾದ ಎ.ಆಯ್. ಧಾರವಾಡ, ವ್ಯವಸ್ಥಾಪಕ ನಿರ್ದೇಶಕ ಗುರುಪಾದಯ್ಯ ಎನ್.ಸಾಲಿವ್ಮಠ ಲಾಭ ವಿಭಾಗಣೆಯನ್ನು ಮಂಡಿಸಿದರು. ಸಹಕಾರ ಸಂಘಗಳ ನೀರಿಕ್ಷಕ ಪ್ರಶಾಂತ ಮುಧೋಳ,
ಲೆಕ್ಕ ಪರಿಶೋಧಕ ಸಿಎ ಕೆ.ಎಸ್. ಚಟ್ಟಿ, ರಾಘವೇಂದ್ರ ಹುಲಕೋಟಿ ಮಾತನಾಡಿದರು. ಅಧ್ಯಕ್ಷ ಬಿ.ಸಿ. ಅಬ್ಬಿಗೇರಿಯವರು ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳನ್ನು ಸನ್ಮಾನಿಸಿದರು.

ಸಂಘದ ಮ್ಯಾನೇಜರ್ ಶಂಕರ ಶ್ಯಾಗೋಟಿ 2023-24ನೇ ಸಾಲಿನ ಲೆಕ್ಕ ಪರಿಶೋಧಕರ ವರದಿ ಅಂದಾಜು ಆಯ-ವ್ಯಯ ಸಾದರಪಡಿಸಿ ಒಪ್ಪಿಗೆ ಪಡೆದರು. ಸಭೆಯಲ್ಲಿ ಉಪಾಧ್ಯಕ್ಷ ಪಿ.ಎಸ್. ಹಿರೇಮಠ, ನಿರ್ದೇಶಕರುಗಳಾದ ಆರ್.ಎನ್. ಧರ್ಮದಾಸ, ಜಿ.ಎನ್. ಸಾಲಿಮಠ, ಎ.ಐ. ಧಾರವಾಡ, ಕೆ.ಜಿ. ಸಂತೋಜಿ, ಮಂಗಳಾ ಮಂಜುನಾಥ ಬೇಲೇರಿ, ಶಾಂತವ್ವ ಎಸ್.ಮುರಗಿ, ಶರಣಪ್ಪ ತಳವಾರ, ಶಂಕರಪ್ಪ ಪಿ.ಗೋಪಾಳಿ, ನರಸಪ್ಪ ಕುರಿ, ದುರಗಪ್ಪ ಡೋಣಿ ಮುಂತಾದವರಿದ್ದರು.

ಸಂಘದ ವ್ಯವಸ್ಥಾಪಕ ಶಂಕರ ಶ್ಯಾಗೋಟಿ ಸ್ವಾಗತಿಸಿದರು. ಅಕೌಂಟೆಂಟ್ ನಾಗರಾಜ ಕೋನಾ ಹಾಗೂ ಪ್ರತಿಭಾ ಮುದಗಲ್ ನಿರೂಪಿಸಿದರು. ಮಾಲಾರ್ಪಣೆ ಹಾಗೂ ಸನ್ಮಾನವನ್ನು ಶರಣಪ್ಪ ಬೆಳ್ಳಿಕೊಪ್ಪ ನೆರವೇರಿಸಿದರು. ಚಂದ್ರು ಆರಿ ವಂದಿಸಿದರು.


Spread the love

LEAVE A REPLY

Please enter your comment!
Please enter your name here