HomeGadag Newsಸೋಮೇಶ್ವರ ದೇವಸ್ಥಾನದ ಅರ್ಚಕರ ಸಭೆ

ಸೋಮೇಶ್ವರ ದೇವಸ್ಥಾನದ ಅರ್ಚಕರ ಸಭೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಸ್ಥಾನದ ಸಮಸ್ತ ಅರ್ಚಕರು ರವಿವಾರ ಹಿರಿಯರಾದ ಮಧುಕರ ಪೂಜಾರ, ಶ್ರೀನಿವಾಸ ಪೂಜಾರ, ಪ್ರಕಾಶ ಪೂಜಾರ ಅವರ ಸಮ್ಮುಖದಲ್ಲಿ ಸಭೆ ಸೇರಿ, ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು.

ಅರ್ಚಕರ ಸಮಿತಿ ಅಧ್ಯಕ್ಷರಾಗಿ ಎರಡು ದಶಕಗಳ ಕಾಲ ಯಶಸ್ವಿಯಾಗಿ ಸಂಘವನ್ನು ಮುನ್ನಡೆಸಿಕೊಂಡು ಹೋಗಿದ್ದ ದಿ. ವಿ.ಎಲ್. ಪೂಜಾರ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಅವರ ಸೇವಾಕಾರ್ಯ ಮತ್ತು ಸಂಘಕ್ಕೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಲಾಯಿತು.

ಇದೇ ಸಂದರ್ಭದಲ್ಲಿ ಅರ್ಚಕರ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ದಿಗಂಬರ ಮುರಲೀಧರ ಪೂಜಾರ ಅವರನ್ನು ಸರ್ವಾನುಮತದಿಂದ ಘೋಷಿಸಲಾಯಿತು. ರಾಘವೇಂದ್ರ ಸೋಮನಾಥ ಪೂಜಾರ (ಉಪಾಧ್ಯಕ್ಷರು), ಸಮೀರ ಕೃಷ್ಣಾಜಿ ಪೂಜಾರ (ಕಾರ್ಯದರ್ಶಿ) ಹಾಗೂ ಕೃಷ್ಣ ದತ್ತಾತ್ರೇಯ ಪೂಜಾರ (ಖಜಾಂಚಿ)ಯಾಗಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ರಮಾಕಾಂತ ಪೂಜಾರ, ಶಾಮಸುಂದರ ಪೂಜಾರ, ದತ್ತಾತ್ರೇಯ ಪೂಜಾರ, ರಾಜೇಶ ಪೂಜಾರ, ಉದಯಕುಮಾರ ಪೂಜಾರ, ನಾಗರಾಜ ಪೂಜಾರ, ಪರಶುರಾಮ ಪೂಜಾರ, ಉಮೇಶ ಕುಲಕರ್ಣಿ, ಮಹೇಶ ಕುಲಕರ್ಣಿ, ರವಿ ಕುಲಕರ್ಣಿ, ಸುಂದರ ಕುಲಕರ್ಣಿ, ಚಿಕ್ಕರಸಯ್ಯ ಪೂಜಾರ, ಸತೀಶ ಕುಲಕರ್ಣಿ, ಪ್ರಕಾಶ ಡಿ.ಪೂಜಾರ, ಬಾಲಕೃಷ್ಣ ಪೂಜಾರ, ರಮೇಶ ಪೂಜಾರ, ಸೋಮನಾಥ ಪೂಜಾರ ಮುಂತಾದವರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!