ಬೆಂಗಳೂರು: ಆದಾಯ ತೆರಿಗೆ ವಂಚಕರಿಗೆ ಬೆಳ್ಳಂಬೆಳಗ್ಗೆ ಐಟಿ ಇಲಾಖೆ ಭರ್ಜರಿ ಶಾಕ್ ನೀಡಿದೆ. ಐಟಿ ಅಧಿಕಾರಿಗಳು ಮೆಗಾ ರೇಡ್ ಮಾಡಿ ಉದ್ಯಮಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಹೌದು ಬೆಂಗಳೂರಿನಲ್ಲಿರುವ ಕೆಲವು ಕಂಪನಿಗಳ ಮೇಲೆ ಬೆಳಗ್ಗೆ ಐಟಿ ದಾಳಿ ನಡೆದಿದೆ.
Advertisement
ದೆಹಲಿ ಹಾಗೂ ಮುಂಬೈ ಮೂಲದ ಕಂಪನಿಗಳ ಕಚೇರಿಗಳ ಮೇಲೆ ದಾಳಿ ನಡೆದಿದ್ದು, ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆಯ ದೆಹಲಿ ಹಾಗೂ ಮುಂಬೈ ಶಾಖೆಯ ಅಧಿಕಾರಿಗಳಿಂದಲೇ ದಾಳಿ ನಡೆದಿದೆ.