ಮಾನಸಿಕ ಖಿನ್ನತೆ: ಇಬ್ಬರು ಮಕ್ಕಳನ್ನು ಕೊಂದು ಐದನೇ ಮಹಡಿಯಿಂದ ಜಿಗಿದು ಮಹಿಳೆ ಸೂಸೈಡ್!

0
Spread the love

ಹೈದರಾಬಾದ್:- ಹೈದರಾಬಾದ್‌ನ ಗಜುಲರಾಮರಂನ ಬಾಲಾಜಿ ಲೇಔಟ್‌ನಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಇಬ್ಬರು ಗಂಡು ಮಕ್ಕಳನ್ನು ಕೊಂದು ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.

Advertisement

8 ವರ್ಷದ ಆಶಿಶ್ ರೆಡ್ಡಿ, 6 ವರ್ಷದ ಅರ್ಷಿತ್ ರೆಡ್ಡಿ ಎಂಬ ಮಕ್ಕಳನ್ನು 33 ವರ್ಷದ ತೇಜಸ್ವಿನಿ ತೆಂಗಿನಕಾಯಿ ತುರಿಯುವ ಮಣೆಯಿಂದ ಹೊಡೆದು ಕೊಲೆ ಮಾಡಿ, ಬಳಿಕ ತಾನೂ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

7 ಪುಟಗಳ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ತೇಜಸ್ವಿನಿ, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಬಗ್ಗೆ ಉಲ್ಲೇಖಿಸಿದ್ದಾರೆ. ಪುತ್ರರಿಬ್ಬರ ಉಸಿರಾಟದ ತೊಂದರೆ ಹಾಗೂ ಪತಿಯ ಬೆಂಬಲದ ಕೊರತೆಯಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗಿರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.

ಘಟನಾ ಸ್ಥಳಕ್ಕೆ ಜೀಡಿಮೆಲ್ಲಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.


Spread the love

LEAVE A REPLY

Please enter your comment!
Please enter your name here