ಮರ್ಚಂಟ್ಸ್ ಲಿಬರಲ್ ಕೋ-ಆಪ್ ಬ್ಯಾಂಕ್‌ಗೆ 3.42 ಕೋಟಿ ರೂ ಲಾಭ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಮರ್ಚಂಟ್ಸ್ ಲಿಬರಲ್ ಕೋ-ಆಪ್. ಬ್ಯಾಂಕ್ ಲಿ ಗದಗ ಇದರ 61ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಜರುಗಿತು. ಬ್ಯಾಂಕಿನ 2024-25ನೇ ಸಾಲಿಗೆ ತೆರಿಗೆ ಮುನ್ನ ಲಾಭ ರೂ. 3 ಕೋಟಿ 42 ಲಕ್ಷ ಆಗಿರುತ್ತದೆ ಹಾಗೂ ಸದಸ್ಯರಿಗೆ ಶೇ. 12 ಡಿವ್ಹಿಡೆಂಡ್ ಘೋಷಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಮೋಹನ ಟಿ.ಕೋಟಿ ತಿಳಿಸಿದರು.

Advertisement

ರಿಸರ್ವ್ ಬ್ಯಾಂಕ್‌ನ ನಿರ್ದೇಶನದಂತೆ ಬ್ಯಾಂಕಿನ ಎಲ್ಲ ಶಾಖೆಗಳಲ್ಲಿ ಕೋರ್ ಬ್ಯಾಂಕಿAಗ್ ಸೌಲಭ್ಯ ಅಳವಡಿಸಿ ಬ್ಯಾಂಕಿನ ಗ್ರಾಹಕರಿಗೆ ಆನ್‌ಲೈನ್ ಸೌಲಭ್ಯ ಒದಗಿಸಲಾಗಿದೆ. ಆಯ್.ಎಮ್.ಪಿ.ಎಸ್, ಎ.ಟಿ.ಎಮ್, ಇಂಟರ್‌ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಇ-ಪಾಸ್ ಪುಸ್ತಕ ಇತರೆ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಈಗಾಗಲೇ ಪ್ರಾರಂಭಿಸಿದ್ದು, ಗ್ರಾಹಕರು ಇವುಗಳ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ಮೋಹನ ಟಿ.ಕೋಟಿ ತಿಳಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಲಾಯಿತು. ಬ್ಯಾಂಕಿನ ಸದಸ್ಯರಾದ ಶರಣಬಸಪ್ಪ ಸಂಗಪ್ಪ ಗುಡಿಮನಿ `ವಾಣಿಜ್ಯ ರತ್ನ’ ಪ್ರಶಸ್ತಿ ಪಡೆದ ಪ್ರಯುಕ್ತ ಸನ್ಮಾನಿಸಲಾಯಿತು. ವೀರಶೈವ ರುದ್ರಭೂಮಿಯ ಕಾರ್ಯದರ್ಶಿ ಸಿ.ಎ ಕೆ.ಎಸ್. ಚೆಟ್ಟಿ ಬ್ಯಾಂಕಿನ ಬೆಳವಣಿಗೆ ಕುರಿತು ಹರ್ಷ ವ್ಯಕ್ತಪಡಿಸಿದರು.

ಬ್ಯಾಂಕಿನ ಸದಸ್ಯ ಎಸ್.ವಾಯ್ ಚಿಕ್ಕಟ್ಟಿ, ಎಚ್.ವ್ಹಿ. ಶಾನಬೋಗರ, ಬ್ಯಾಂಕಿನ ಮಾಜಿ ವ್ಯವಸ್ಥಾಪಕ ಜಿ.ಬಿ. ಅಂಗಡಿ ಮಾತನಾಡಿದರು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ರಾಜು ಎಲ್.ಕೋಟಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಕುಬೇರಗೌಡ ಎಸ್.ಪರ್ವತಗೌಡ್ರ, ಆಡಳಿತ ಮಂಡಳಿ ಸದಸ್ಯರಾದ ವಿಶ್ವನಾಥ ಸಿ.ರಾಮನಕೊಪ್ಪ, ಶರಣಬಸಪ್ಪ ಕೆ.ಕುರಡಗಿ, ತೋಟೊಸಾ ಆರ್.ಭಾಂಡಗೆ, ಸಂತೋಷ ಬಿ.ಅಬ್ಬಿಗೇರಿ, ಚಂದ್ರಕಾಂತ ಎಸ್.ಸಂಕಣ್ಣವರ, ಶಿವಾನಂದ ಎಚ್.ನಡವಲಗುಡ್ಡ, ಚನವೀರಪ್ಪ ಟಿ.ದುಂದೂರ, ಶಿವವ್ವ ಕೆ.ಕುರಡಗಿ, ಪಾರ್ವತಿದೇವಿ ಎಸ್.ಸಂಕಣ್ಣವರ, ವೃತ್ತಿಪರ ನಿರ್ದೇಶಕರಾದ ಸಿ.ಎ ಬಸವರಾಜ ಎಂ.ಬಳಗೇರಿ, ಬಸವರಾಜ ಎಮ್.ಬಂದಕ್ಕನವರ, ಶಾಖಾ ವ್ಯವಸ್ಥಾಪಕರು, ಬ್ಯಾಂಕಿನ ಸಿಬ್ಬಂದಿಗಳು, ಪಿಗ್ಮಿ ಸಂಗ್ರಹಕಾರರು, ಬ್ಯಾಂಕಿನ ಶೇರುದಾರರು, ಠೇವುದಾರರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು. ಬ್ಯಾಂಕಿನ ನಿರ್ದೇಶಕ ಶರಣಬಸಪ್ಪ ಕುರಡಗಿ ವಂದಿಸಿದರು.


Spread the love

LEAVE A REPLY

Please enter your comment!
Please enter your name here