ವಿಜಯಸಾಕ್ಷಿ ಸುದ್ದಿ, ಗದಗ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 623 ಅಂಕಗಳನ್ನು ಪಡೆದು ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ ತೃತೀಯ ಸ್ಥಾನವನ್ನು ಪಡೆದ ವಿದ್ಯಾರ್ಥಿನಿ ಮುಮ್ತಾಜ್ ಬಾಬರಸಾಬ್ ಅತ್ತಾರ ಅವರಿಗೆ ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ಯುವ ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾದ ರಾಜ್ಯಾಧ್ಯಕ್ಷ ಮಹ್ಮದ್ ಶಫಿ ನಾಗರಕಟ್ಟಿ ಮಾತನಾಡುತ್ತಾ, ಸಮುದಾಯದ ಹೆಣ್ಣುಮಕ್ಕಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಣವನ್ನು ಪಡೆಯಬೇಕು ಹಾಗೂ ಒಳ್ಳೆಯ ಹುದ್ದೆಗಳಲ್ಲಿ ಇರಬೇಕು ಎಂದರಲ್ಲದೆ, ಪ್ರತಿಭಾನ್ವಿತ ವಿದ್ಯಾರ್ಥಿನಿಯ ಭವಿಷ್ಯ ಉಜ್ವಲವಾಗಲೆಂದು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಮ್ತಾಜ್ ಬಾಬರಸಾಬ್ ಅತ್ತಾರ, ಎಂ.ಬಿ.ಬಿ.ಎಸ್ ಓದುವ ಬಯಕೆಯನ್ನು ವ್ಯಕ್ತಪಡಿಸಿದರು.
ಗದಗ ಜಿಲ್ಲಾ ಯುವ ಘಟಕದ ಅಧ್ಯಕ್ಷ ಯಾಸೀನ್ ಅ. ಮುಲ್ಲಾ ಸ್ವಾಗತಿಸಿದರು. ಸಂಘಟನೆಯ ಸದಸ್ಯರಾದ ಅಬ್ದುಲ್ ಮುನಾಫ್ ಸಯ್ಯದ್ ವಂದಿಸಿದರು. ಈ ಸಂದರ್ಭದಲ್ಲಿ ವಿಧ್ಯಾರ್ಥಿನಿಯ ಪಾಲಕರಾದ ಬಾಬರಸಾಬ್ ಅತ್ತಾರ ದಂಪತಿಗಳು, ನಾಸೀರ್ ನರೇಗಲ್, ಗದಗ ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ಅಫ್ಜಲ್ ಮನಿಯಾರ, ಗದಗ ಜಿಲ್ಲಾ ಯುವ ಘಟಕದ ತಾಲೂಕು ಅಧ್ಯಕ್ಷ ಇನ್ನೂಸ ಮಲ್ಲಾದರವೇಶ, ಯೂಸುಫ್ ಇಲ್ಲಾಳ, ಸೊಹೆಲ್ ಹಣಗಿ, ಯೂನಸ್ ಇಟಗಿ, ಯೂಸುಫ್ ನಾಲಬಂದ ಇನ್ನಿತರರು ಉಪಸ್ಥಿತರಿದ್ದರು.