ಬೆಂಗಳೂರು: ಮೆಟ್ರೋ ನಿರ್ವಹಣೆ ಕೇಂದ್ರದ ಕೈನಲ್ಲಿದೆ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರ ಏನು ಇಲ್ಲ ಎಂದು ಮಾಜಿ ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ. ಮೆಟ್ರೋ ಟಿಕೆಟ್ ದರ ಹೆಚ್ಚಳದ ಕುರಿತು ನಗರದಲ್ಲಿ ಮಾತನಾಡಿದ ಅವರು, ಬೆಂಗಳೂರಿಗೆ ಕೆಟ್ಟ ಹೆಸರು ತರುವ ಹುನ್ನಾರವೂ ಇದೆ.
ಮೆಟ್ರೋ ನಿರ್ವಹಣೆ ಕೇಂದ್ರದ ಕೈನಲ್ಲಿದೆ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರ ಏನು ಇಲ್ಲ.ರಾಜ್ಯ ಸರ್ಕಾರ ಏನಾದರೂ ಇದ್ದರೆ ಕೇಂದ್ರಕ್ಕೆ ಪತ್ರ ಬರೆಯಬಹುದು. ಮೆಟ್ರೋ ಬೋರ್ಡ್ ಶಿಫಾರಸ್ಸಿಗೆ ಕೇಂದ್ರ ಒಪ್ಪಿಗೆ ಕೊಟ್ಟಿದೆ.
ಈ ಕುರಿತು ಸಂಸದರು ನೀಡಿದ ಹೇಳಿಕೆಯನ್ನು ನಾನು ನೋಡುತ್ತಿದ್ದೇನೆ. ಮೋದಿ ಮುಂದೆ ಕೇಂದ್ರ ರೈಲ್ವೆ ಸಚಿವರು ಬೇಡಿಕೆ ಇಡಲಿ. ಮೆಟ್ರೋಗೆ ನೀಡುತ್ತಿರುವ ಕೇಂದ್ರದ ಸಹಕಾರವನ್ನು ಹೆಚ್ಚಿಸಲಿ. ನಮ್ಮ ತೆರಿಗೆ ಪಾಲಿನ ಹಣವನ್ನ ಕೊಡಿಸಲಿ. ಮೆಟ್ರೋ ಸ್ಟೇಷನ್ ಮುಂದೆ ಬಾವುಟ ಹಿಡಿದು ಡ್ರಾಮಾ ಮಾಡೊದನ್ನ ಬಿಡಿ ಎಂದು ಬಿಜೆಪಿಗರ ವಿರುದ್ಧ ಡಿಕೆ ಸುರೇಶ್ ಕಿಡಿಕಾರಿದ್ದಾರೆ.