ಬೆಂಗಳೂರು: ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ದರ ಏರಿಕೆಯ ಶಾಕಿಂಗ್ ಸುದ್ದಿ ಸಿಕ್ಕಿದೆ.
ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್, ಫೆಬ್ರವರಿಯಿಂದ ಟಿಕೆಟ್ ದರವನ್ನು 5% ಹೆಚ್ಚಿಸಲು ಮುಂದಾಗಿದೆ. ಇದು ಶುಲ್ಕ ನಿಗದಿ ಸಮಿತಿ ಪ್ರತಿವರ್ಷ ಶಿಫಾರಸು ಮಾಡುವ 5% ದರ ಹೆಚ್ಚಳದ ನಿಯಮದ ಅಡಿಯಲ್ಲಿ ಕಾನೂನುಬದ್ಧವಾಗಿದ್ದು, ಮೆಟ್ರೋ ರೈಲು ನಿರ್ವಹಣೆ ಕಾಯ್ದೆ 2002 ರ 33ನೇ ಅಡಿಯಲ್ಲಿ ಅನುಸರಿಸಲಾಗುತ್ತಿದೆ.
ಕಳೆದ ವರ್ಷ ಮಾತ್ರ BMRCL 71% ದರ ಏರಿಕೆ ಮಾಡಿದ್ದು, ಅದರಿಂದ ಪ್ರಯಾಣಿಕರಿಗೆ ಭಾರವಾದ ಸರಾಸರಿ ಶುಲ್ಕವನ್ನು ಭರಿಸಲು ಆಗಿತ್ತು. ಈಗಿನ 5% ದರ ಏರಿಕೆ ಹೆಚ್ಚುವರಿ ಹಣಕಾಸು ಒದಗಿಸುವ ಉದ್ದೇಶದಿಂದ ಕೈಗೊಳ್ಳಲಾಗಿದೆ. ಪ್ರತಿವರ್ಷದ ದರ ಏರಿಕೆಯಿಂದಾಗಿ ಸಾಮಾನ್ಯ ಪ್ರಯಾಣಿಕರ ಹತ್ತಿರ ಮೆಟ್ರೋ ಸೇವೆ ದುಬಾರಿ ಆಗುತ್ತಿದೆ ಎಂದು ಕೆಲವರು ತೀವ್ರವಾಗಿ ಆಕ್ಷೇಪಿಸುತ್ತಿದ್ದಾರೆ. ಆದರೆ BMRCL ಈ ದರ ಏರಿಕೆಯನ್ನು ಪ್ರಯಾಣಿಕರಿಗೆ ಉತ್ತಮ ಮತ್ತು ಸುರಕ್ಷಿತ ಸೇವೆಯನ್ನು ನಿರಂತರವಾಗಿ ಒದಗಿಸುವಂತೆ ಬದ್ಧತೆಯೊಂದಿಗೆ ನಿಗದಿಪಡಿಸಿದೆ.



