ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಆದರ್ಶ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 9ರಲ್ಲಿ ಎಂ.ಜಿ. ಚಾರಿಟೇಬಲ್ ಟ್ರಸ್ಟ್ ಹಾಗೂ ಅಬುಹುರೇರಾ ಮಸ್ಜಿದ್‌ನ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಲಾಯಿತು.
Advertisement
ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್ನ ಕಾರ್ಯದರ್ಶಿ ಮೌಲಾನಾ ಅಬ್ದುಲಗಪೂರಸಾಬ ಪಲ್ಲೇದ, ಯಾರಲ್ಲಿ ವಿದ್ಯೆ ಇದೆಯೋ ಅವರಿಗೆ ಸಮಾಜ ಗೌರವ ನೀಡುತ್ತದೆ ಎಂದರು.
ಶಿಕ್ಷಣ ಇಲಾಖೆಯ ದಾಸರ ಮಾತನಾಡಿ, ಪುಸ್ತಕವೆಂದರೆ ನಾವು ಸರಸ್ವತಿಯ ಪ್ರತಿರೂಪ ಎಂದೇ ಭಾವಿಸುತ್ತೇವೆ. ಅದಕ್ಕಾಗಿ ಟ್ರಸ್ಟ್ ವತಿಯಿಂದ ನೀಡಿದ ಪುಸ್ತಕಗಳನ್ನು ಬಳಸಿಕೊಂಡು ವಿದ್ಯೆ ಕಲಿಯಬೇಕು ಎಂದು ಮಕ್ಕಳಿಗೆ ಕಿವಿಮಾತನ್ನು ಹೇಳಿದರು.
ಬಿಆರ್‌ಪಿ ಎಂ.ಎ. ಯರಗುಡಿ ಮಾತನಾಡಿದರು. ಈ ಸಂದರ್ಭದಲ್ಲಿ ಮೊದಿನ ಸಾಬ್ ಕನಕವಾಡ, ಶಾಲೆಯ ಮುಖ್ಯ ಗುರುಗಳು ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.