ದಾವಣಗೆರೆ: ಸಾಲಕ್ಕೆ ಹೆದರಿ ತಾಯಿ–ಮಗಳು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ನಗರದ ತುಂಗಭದ್ರ ನದಿ ಸೇತುವೆ ಬಳಿ ನಡೆದಿದೆ.
ಹರಿಹರ ತಾಲ್ಲೂಕಿನ ಗಂಗನರಸಿ ಗ್ರಾಮದ ಸುವರ್ಣಮ್ಮ (60) ಹಾಗೂ ಪುತ್ರಿ ಗೌರಮ್ಮ (30) ಮೃತ ದುರ್ಧೈವಿಗಳಾಗಿದ್ದು, ಕೆಲ ವರ್ಷಗಳ ಹಿಂದೆ ಪತಿ ನಿಧನರಾಗಿದ್ದರು. ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಸುವರ್ಣಮ್ಮ ಮೂವರು ಪುತ್ರಿಯರಲ್ಲಿ ಇಬ್ಬರ ವಿವಾಹ ಮಾಡಿದ್ದರು. ಇನ್ನೊಬ್ಬ ಮಗಳು ಗೌರಮ್ಮ ಅಂಗವಿಕಲೆಯಾಗಿದ್ದು, ತಾಯಿ ಜೊತೆ ಇದ್ದರು.
ಇನ್ನೂ ಸ್ವ ಸಹಾಯ ಸಂಘ ಹಾಗೂ ಮೈಕ್ರೊ ಫೈನಾನ್ಸ್ ಗಳಲ್ಲಿ 3ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದರು. ಎರಡು ಸಾಲಕ್ಕೆ ವಾರಕ್ಕೊಮ್ಮೆ ಹಾಗೂ ಒಂದು ಸಾಲಕ್ಕೆ ಮಾಸಿಕ ಕಂತು ಕಟ್ಟಬೇಕಾಗಿತ್ತು.
ಆದ್ರೆ ಸಾಲದ ಕಂತು ಕಟ್ಟಲಾಗಿದೆ ಪುತ್ರಿಯೊಂದಿಗೆ ಜುಲೈ 1ರಂದು ಗ್ರಾಮ ತೊರೆದಿದ್ದ ಸುವರ್ಣಮ್ಮ ಇಂದು ರೈಲ್ವೆ ಸೇತುವೆಯ ಮೇಲೆ ತೆರಳಿ ಆತ್ಮಹತ್ಯೆ ಶರಣಾಗಿದ್ದಾರೆ. ಇನ್ನೂ ಘಟನೆ ಸಂಬಂಧ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.