ಬೆಂಗಳೂರು:- ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭಯೋತ್ಪಾದಕರನ್ನು ಮಟ್ಟ ಹಾಕುತ್ತೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
Advertisement
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಕಾಶ್ಮೀರದಲ್ಲಿ ನಿನ್ನೆ ಮಧ್ಯಾಹ್ನ ನಡೆದ ಘಟನೆ ಹೇಯ ಕೃತ್ಯ. ಅಲ್ಲದೇ ಇದನ್ನು ನಾವೆಲ್ಲರೂ ತೀವ್ರವಾಗಿ ಖಂಡಿಸಬೇಕು. ಇಂಥ ಪೈಶಾಚಿಕ ಕೃತ್ಯ ಮಾಡಿದ್ರಿಂದ ಅವ್ರು ಏನನ್ನು ಸಾಧಿಸಿದ್ರು? ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ತಡೆಯಲು ಕೇಂದ್ರ ಸಾಕಷ್ಟು ಕ್ರಮ ಕೈಗೊಂಡಿತ್ತು. ಇದು ಪಾಕಿಸ್ತಾನದ ಸಂಚಿನಿಂದ ನಡೆದ ಘಟನೆ.
ಭಾರತೀಯರೆಲ್ಲರೂ ಇದನ್ನು ಖಂಡಿಸಬೇಕು. ಇಂಥ ಕೃತ್ಯಗಳನ್ನು ಮಾಡಿದವರ ಮಟ್ಟ ಹಾಕುವ ಕೆಲಸ ಭಾರತ ಸರ್ಕಾರ ಮಾಡುತ್ತೆ. ಇವ್ರು ಮನುಷ್ಯರಲ್ಲ, ಹಿಂದೂಗಳನ್ನ ಟಾರ್ಗೆಟ್ ಮಾಡಿದ್ದಾರೆ. ಅವರು ಮನುಷ್ಯರು ಅಲ್ವೇಅಲ್ಲ. ಇನ್ನೂ ಎರಡು ಮೂರು ದಿನಗಳಲ್ಲಿ ಆ ಭಯೋತ್ಪಾದಕರನ್ನು ಮಟ್ಟ ಹಾಕುತ್ತೆ ನಮ್ಮ ಸರ್ಕಾರ ಎಂದು ವಿ.ಸೋಮಣ್ಣ ಹೇಳಿದ್ದಾರೆ.