ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಬಸವದಳದ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಗದುಗಿನ ವಿಶ್ವಕಲ್ಯಾಣ ಸಂಸ್ಥೆಯ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ಪೂಜ್ಯ ಡಾ. ಮಹಾಂತಬಸವಲಿಂಗ ಸ್ವಾಮಿಗಳು ಬೇಲೂರು ಇವರ ಸಾನ್ನಿಧ್ಯದಲ್ಲಿ ನಾಗರ ಪಂಚಮಿಯ ನಿಮಿತ್ತ ಮಕ್ಕಳಿಗೆ ಹಾಲು, ಬಿಸ್ಕಿಟ್ ವಿತರಿಸಲಾಯಿತು.
ಪೂಜ್ಯ ಡಾ. ಮಹಾಂತಬಸವಲಿಂಗ ಸ್ವಾಮಿಗಳು ಹಾಲಿನ ಮಹತ್ವ ವಿವರಿಸಿ, ಜನ ಕಲ್ಲು ನಾಗರಕ್ಕೆ, ಮಣ್ಣು ನಾಗರಕ್ಕೆ ಹಾಲು ಎರೆದು ಹಾಳು ಮಾಡದೇ ಇಂತಹ ದೇವರ ಸ್ವರೂಪರಾದ ಮಕ್ಕಳಿಗೆ ವಿತರಿಸುವ ಮೂಲಕ ಆಚರಿಸಬೇಕೆಂದು ಕರೆ ನೀಡಿದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಣ್ಣ ಭರಮಗೌಡ್ರ, ಬಸವದಳದ ಅಧ್ಯಕ್ಷ ವಿ.ಕೆ. ಕರೀಗೌಡ್ರ, ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ, ನಗರಸಭೆ ಸದಸ್ಯರಾದ ಚಂದ್ರಣ್ಣ ತಡಸದ, ಶ್ರೀಮಠದ ಭಕ್ತರು, ಬಸವಾಭಿಮಾನಿಗಳು ಪಾಲ್ಗೊಂಡಿದ್ದರು. ಪ್ರಕಾಶ ಅಸುಂಡಿ ಕಾರ್ಯಕ್ರಮ ನಿರೂಪಿಸಿದರು.
ವಿಶ್ವಕಲ್ಯಾಣ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಹದ್ದಣ್ಣನವರು ಪೂಜ್ಯರನ್ನು ಹಾಗೂ ಬಸವಪರ ಸಂಘಟನೆಗಳನ್ನು ಶ್ಲಾಘಿಸಿದರು. ನಂತರ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಮೆಡಿಕಲ್ ಸುಪರಿಡೆಂಡೆಂಟ್ ಡಾ. ರೇಖಾ ಸೋನೆವಾನೆ, ಡಾ. ಹಳೇಮನಿ, ಜ.ತೋ. ಮಠ ಜಾತ್ರಾ ಸಮೀತಿ ಅಧ್ಯಕ್ಷ ಡಾ. ಧನೇಶ ದೇಸಾಯಿ, ಚಂದ್ರು ತಡಸದ, ವಿ.ಕೆ. ಕರಿಗೌಡ್ರ, ಶಿವಸಂಗಮ ಗ್ರುಪ್‌ನ ಪಾಲುದಾರರಾದ ಎಂ.ಬಿ. ಲಿಂಗಧಾಳ ಭಾಗವಹಿಸಿದ್ದರು.
ಗೌರಕ್ಕ ಬಡಿಗಣ್ಣನವರ ಮಾತನಾಡಿದರು. ಎನ್.ಎಂ. ಪವಾಡಿಗೌಡ್ರ ಶೇಖಣ್ಣಾ ಕವಳಿಕಾಯಿ ಕಾರ್ಯಕ್ರಮ ನಿರೂಪಿಸಿದರು.