ಹುಬ್ಬಳ್ಳಿ: ಹಾಲು, ಕರೆಂಟ್ ದರ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಎಚ್.ಕೆ.ಪಾಟೀಲ್ ಸಮರ್ಥನೆ ಕೊಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ದೇಶದ ಯಾವದೇ ರಾಜ್ಯ ನೋಡಿ, ನಮ್ಮ ರಾಜ್ಯದಲ್ಲಿ ಐದು ರೂಪಾಯಿ ಕಡಿಮೆ ಇದೆ. ರೈತರ ಬೇಡಿಕೆ ಗಮನಿಸಿ,ಎಷ್ಟು ಕಡಿಮೆ ಸಾಧ್ಯವೋ,ಅಷ್ಟು ಹೆಚ್ಚು ಮಾಡಿದ್ದೇವೆ. ಹೆಚ್ಚಳ ಮಾಡಿರೋ 4 ರೂಪಾಯಿ ರೈತರಿಗೆ ಹೋಗತ್ತೆ ಎಂದರು.
Advertisement
ಮುಸಲ್ಮಾನರಿಗೆ ಮೀಸಲಾತಿ ವಿಚಾರವಾಗಿ ಬಿಜೆಪಿಯವರು ಅಫಡವಿಟ್ ಕೊಟ್ಟಿದ್ದಾರೆ. ಬಿಜೆಪಿಯವರು ಇದನ್ನ ರಾಜಕೀಯ ವಿಷಯವಾಗಿ ಮಾಡ್ತೀದಾರೆ ಎಂದರು. ನೀವು ಬಿಜೆಪಿಯವರು ಕೇಳಿ ಕಾಂಗ್ರೆಸ್ ಗೆ ಬಂದ್ರೆ ಕರಕೋತಿರಾ ಅನ್ನೋ ಪ್ರಶ್ನೆಗೆ ಪಾಟೀಲ್ ಉತ್ತರ.ಅದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದರು.