ಟಾಲಿವುಡ್ ಬ್ಯೂಟಿ ತಮ್ಮನ್ನಾ ಹಾಗೂ ನಟ ವಿಜಯ್ ವರ್ಮ್ ಲವ್ ಸುದ್ದಿ ಗುಟ್ಟಾಗಿ ಉಳಿದಿಲ್ಲ. ಹೋದಲ್ಲಿ ಬಂದಲ್ಲೆಲ್ಲ ಕೈ ಕೈ ಹಿಡಿದುಕೊಂಡು ಸುತ್ತಾಡುವ ಜೋಡಿ ಆಗಾಗ ಫೋಟೋ ಶೂಟ್ ಕೂಡ ಮಾಡಿಸ್ತಿರ್ತಾರೆ. ಇದೀಗ ತಮ್ಮನ್ನಾ ಹಾಗೂ ವಿಜಯ್ ಹಸೆಮಣೆ ಏರಲು ಸಜ್ಜಾಗಿದ್ದು ಮದುವೆಗೆ ಭರ್ಜರಿ ತಯಾರಿ ಮಾಡಿಕೊಳ್ತಿದ್ದಾರಂತೆ. ಹೀಗಾಗಿ ಸದ್ಯ ಜೋಡಿ ಹೊಸ ಮನೆ ಹುಡುಕಾಟದಲ್ಲಿ ಬ್ಯುಸಿಯಾಗಿದ್ದಾರಂತೆ.
ಮೂಲಗಳ ಪ್ರಕಾರ ತಮ್ಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಬರುವ ವರ್ಷ ಅಂದ್ರೆ 2025ರಲ್ಲಿ ಮದುವೆಯಾಗುವುದು ಪಕ್ಕಾ ಎನ್ನಲಾಗುತ್ತಿದ್ದು. ಹೀಗಾಗಿ ಜೋಡಿ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಲ್ಯಾವಿಶ್ ಅಪಾರ್ಟ್ಮೆಂಟ್ವೊಂದರಲ್ಲಿ ಸರಿಯಾದ ಮನೆಯನ್ನು ಹುಡುಕುವುದರಲ್ಲಿ ಈ ಜೋಡಿ ನಿರತವಾಗಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ತಮ್ಮನ್ನಾ ಭಾಟಿಯಾ ಆಗಲಿ, ವಿಜಯ್ ವರ್ಮಾ ಆಗಲಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಕೇವಲ ಮೌನ ಕಾಯ್ದುಕೊಂಡಿದ್ದಾರೆ. ಇಲ್ಲಿಯವರೆಗೂ ಅವರ ಮದುವೆಯ ಬಗ್ಗೆ ಎಲ್ಲಿಯೂ ಕೂಡ ಅಧಿಕೃತವಾಗಿ ಹೇಳಿಕೊಂಡಿಲ್ಲ. ಜೋಡಿಗಳು ಅಧಿಕೃತವಾಗಿ ಹೇಳಿದ ಬಳಿಕವೇ ಮದುವೆ ಸುದ್ದಿಗೆ ಸ್ಪಷ್ಟಮೆ ಸಿಗಲಿದೆ.