ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿ ಪಡೆದಿರುವ ತಮನ್ನಾ ಭಾಟಿಯಾ ದಕ್ಷಿಣ ಚಿತ್ರರಂಗದ ಬಹುಬೇಡಿಕೆಯ ನಟಿ. ಪ್ರಮುಖವಾಗಿ ತೆಲಗು ಮತ್ತು ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಇವರು ಕೆಲ ಹಿಂದಿ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ.
ಮಿಲ್ಕಿ ಬ್ಯೂಟಿ ತಮನ್ನಾಗೆ ಬಿಗ್ ಚಾನ್ಸ್ ಒಂದು ಸಿಕ್ಕಿದೆ. ಬಾಲಿವುಡ್‌ನಲ್ಲಿ ನಟಿಗೆ ಬಿಗ್ ಚಾನ್ಸ್‌ವೊಂದು ಸಿಕ್ಕಿದೆ. ಲವರ್ ಬಾಯ್ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಿಲ್ಕಿ ಬ್ಯೂಟಿ ರೊಮ್ಯಾನ್ಸ್ ಮಾಡಲಿದ್ದಾರೆ.
ಪೌರಾಣಿಕ ಕುರಿತಾದ ‘ವ್ವಾನ್’ ಚಿತ್ರಕ್ಕಾಗಿ ಏಕ್ತಾ ಕಪೂರ್ ಜೊತೆ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಕೈಜೋಡಿಸಿದ್ದಾರೆ. ಈ ಚಿತ್ರವನ್ನು ದೀಪಕ್ ಮಿಶ್ರಾ ಎಂಬುವವರು ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರಕ್ಕೆ ನಾಯಕಿಯಾಗಿ ತಮನ್ನಾರನ್ನು ಆಯ್ಕೆ ಮಾಡಲಾಗಿದೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ.
ಸಿದ್ಧಾರ್ಥ್ ಜೊತೆ ತಮನ್ನಾ ಈ ಹೊಸ ಜೋಡಿಯನ್ನು ಸಿನಿಮಾದಲ್ಲಿ ತೋರಿಸಲು ಹೊರಟಿದ್ದಾರೆ. ಈಗಾಗಲೇ ನಟಿಯೊಂದಿಗೆ ಚಿತ್ರತಂಡ ಮಾತುಕತೆ ನಡೆಸಿದೆ ಎನ್ನಲಾಗಿದೆ. ಈ ಚಿತ್ರಕ್ಕೆ ತಮನ್ನಾನೇ ನಾಯಕಿನಾ? ಎಂಬುದನ್ನು ಚಿತ್ರತಂಡ ತಿಳಿಸಬೇಕಿದೆ. ಅಂದಹಾಗೆ, ತಮನ್ನಾ ಭಾಟಿಯಾಗೆ ಬಾಲಿವುಡ್‌ನಲ್ಲಿ ಮಾತ್ರವಲ್ಲ, ತೆಲುಗು, ತಮಿಳಿನಲ್ಲೂ ಭಾರೀ ಬೇಡಿಕೆಯಿದೆ