ದಾವಣಗೆರೆ:- ರಾಗಿ ಯಂತ್ರ ಪಲ್ಟಿ ಹೊಡೆದು ಇಬ್ಬರು ಕೃಷಿ ಕಾರ್ಮಿಕರು ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಂಗಾರಕ್ಕನಗುಡ್ಡ ಗ್ರಾಮದಲ್ಲಿ ಜರುಗಿದೆ.
Advertisement
35 ವರ್ಷದ ಮಹೇಶ್, 30 ವರ್ಷದ ರಾಧಮ್ಮ ಮೃತ ಕೃಷಿ ಕಾರ್ಮಿಕರು ಎನ್ನಲಾಗಿದೆ. ರಾಗಿ ಕೊಯ್ಲು ಮುಗಿಸಿಕೊಂಡು ಮನೆಗೆ ಮರಳುವಾಗ ರಾಗಿಯಂತ್ರ ಪಲ್ಟಿಯಾಗಿದೆ. ಈ ವೇಳೆ ಯಂತ್ರದ ಕೆಳಗಿ ಸಿಲುಕಿ ಇಬ್ಬರು ಕೃಷಿ ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಇನ್ನೂ ಮೃತದೇಹಗಳನ್ನು ಜಗಳೂರು ತಾಲ್ಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.