ಅಗ್ನಿ ಅವಘಡ: ಫರ್ನಿಚರ್ ಅಂಗಡಿಯಲ್ಲಿ ಕೋಟ್ಯಂತರ ಮೌಲ್ಯದ ವಸ್ತು ಬೆಂಕಿಗಾಹುತಿ!

0
Spread the love

ಬೆಂಗಳೂರು :- ಬೆಂಕಿ ಅವಘಡದಿಂದ ಫರ್ನಿಚರ್ ಅಂಗಡಿಯಲ್ಲಿ ಕೋಟ್ಯಂತರ ಮೌಲ್ಯದ ವಸ್ತು ಅಗ್ನಿಗಾಹುತಿ ಆದ ಘಟನೆ ಜರುಗಿದೆ.

Advertisement

ರಾಜಧಾನಿ ಬೆಂಗಳೂರಿನ ವಿಜ್ಞಾನ ನಗರದಲ್ಲಿ ಘಟನೆ ನಡೆದಿದೆ. ರಾತ್ರಿ 8:30ಕ್ಕೆ ಅಂಗಡಿ ಮಾಲೀಕ ಎಂದಿನಂತೆ ಅಂಗಡಿ ಬಂದ್ ಮಾಡಿಕೊಂಡು ಮನೆಗೆ ಹೋಗಿದ್ದಾರೆ. 9:30ರ ಸುಮಾರಿಗೆ ಫರ್ನಿಚರ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಕ್ಕಪಕ್ಕದವರು ನೋಡಿ ಮಾಲೀಕ ಶಿವರಾಜನ್‌ಗೆ ಕರೆ ಮಾಡಿ ವಿಷಯ ತಿಳಿಸಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅಗ್ನಿಶಾಮಕ ವಾಹನ ಬರುವಷ್ಟರಲ್ಲಿ ಅಂಗಡಿಯಲ್ಲಿದ್ದ ಫರ್ನಿಚರ್ಸ್‌ಗೆ ಬೆಂಕಿ ತಗುಲಿ ಕ್ಷಣಾರ್ಧದಲ್ಲಿ ಬೆಂಕಿ ದೊಡ್ಡಮಟ್ಟದಲ್ಲಿ ಅವರಿಸಿಕೊಂಡಿದೆ.
ಎರಡು ಅಗ್ನಿಶಾಮಕ ವಾಹನಗಳಲ್ಲಿ ಬಂದ ಅಗ್ನಿಶಾಮಕ ಸಿಬ್ಬಂದಿ ಅಕ್ಕಪಕ್ಕದಲ್ಲಿರೋ ಫರ್ನಿಚರ್ಸ್ ಅಂಗಡಿಗಳಿಗೆ ಬೆಂಕಿ ತಗುಲದಂತೆ ಎಚ್ಚರವಹಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂಗಡಿ ಬಂದ್ ಆಗಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ


Spread the love

LEAVE A REPLY

Please enter your comment!
Please enter your name here