ಮಿನಿ ಸಿಲಿಂಡರ್​ಗಳು ಬ್ಲಾಸ್ಟ್: ಹಲವರಿಗೆ ಗಂಭೀರ ಗಾಯ!

0
Spread the love

ಬಾಗಲಕೋಟೆ:- ಅಕ್ರಮವಾಗಿ ಸಂಗ್ರಹಿಸಿದ್ದ ಮಿನಿ ಸಿಲಿಂಡರ್​ಗಳು ಬ್ಲಾಸ್ಟ್ ಆದ ಪರಿಣಾಮ ಹಲವರು ಗಂಭೀರವಾಗಿ ಗಾಯಗೊಂಡ ಘಟನೆ ಬಾದಾಮಿಯ ಶಿವಾಜಿ ಸರ್ಕಲ್ ಬಳಿ ನಡೆದಿದೆ.

Advertisement

ದಾದಾಫಿರ್ ಜಮಾದಾರ್ ಎಂಬುವವರಿಗೆ ಸೇರಿದ ಅಂಗಡಿಯಲ್ಲಿ ಸಿಲಿಂಡರ್​ಗಳು ಬ್ಲಾಸ್ಟ್ ಆಗಿವೆ. ಅಕ್ರಮವಾಗಿ ಮಿನಿ ಸಿಲಿಂಡರ್​ಗಳನ್ನ ಸಂಗ್ರಹಿಸಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ. ಇನ್ನು, ಸಿಲಿಂಡರ್​ಗಳು ಏಕಾಏಕಿ ಬ್ಲಾಸ್ಟ್​ ಆಗುತ್ತಿದ್ದಂತೆ ದಟ್ಟವಾದ ಬೆಂಕಿ ಆವರಿಸಿಕೊಂಡಿದೆ.

ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯರು, ಹೋಮ್​ ಗಾರ್ಡ್ಸ್​​​ಗಳು ಸ್ಥಳದಿಂದ ಓಡಿ ಹೋಗಿದ್ದಾರೆ. ಅಲ್ಲದೇ 3 ರಿಂದ 4 ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಬಾದಾಮಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಸಿಲಿಂಡರ್​ಗಳಸ್ಫೋಟದ ಭಯಾನಕ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.


Spread the love

LEAVE A REPLY

Please enter your comment!
Please enter your name here