HomeArt and Literatureಕಳಸಾಪುರದಲ್ಲಿ `ಮಿನಿ ಮಂತ್ರಾಲಯ’

ಕಳಸಾಪುರದಲ್ಲಿ `ಮಿನಿ ಮಂತ್ರಾಲಯ’

For Dai;y Updates Join Our whatsapp Group

Spread the love

ನಮಗೂ ಒಂದು ಮಿನಿ ಮಂತ್ರಾಲಯಬೇಕು ಎಂಬ ದಶಕಗಳ ಬೇಡಿಕೆಯ ನಂತರ ಗದಗಕ್ಕೆ ಕೊನೆಗೂ ಮಿನಿ ಮಂತ್ರಾಲಯ ದೊರೆತಿದ್ದು, ಕಳೆದ ಕೆಲವು ದಿನಗಳಿಂದ ದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿದ್ದಾರೆ. ಗದಗ ನಗರದ ಹತ್ತಿರ ಹಾಗೂ ಕಳಸಾಪುರ ಗ್ರಾಮದ ಬಳಿ ರಾಘವೇಂದ್ರಸ್ವಾಮಿ ಮಠವಿದ್ದು, ಈ ಜಾಗವು ತುಂಬಾ ವಿಶಾಲವಾಗಿದೆ. ಗದಗ ಜಿಲ್ಲೆಯ ಕಿರಟಗೇರಿ ಗ್ರಾಮಕ್ಕೆ ರಾಯರು ಭೇಟಿ ನೀಡಿದ್ದು, ಭಕ್ತರೊಬ್ಬರ ಮಗು ಮಾವಿನ ಹಣ್ಣಿನ ಸೀಕರಣಿಯಲ್ಲಿ ಬಿದ್ದು ಮೃತಪಟ್ಟಾಗ, ತಮ್ಮ ಪವಾಡದಿಂದ ಆ ಮಗುವನ್ನು ಬದುಕಿಸಿದ್ದು ಎಂತವರಿಗೂ ಮೈಯಲ್ಲಿ ರೋಮಾಂಚನ ಮೂಡಿಸುಸತ್ತದೆ.

ಆ ಸನ್ನಿವೇಶ ನಡೆದಿದ್ದು ಗದಗಿನ ಹತ್ತಿರವೇ ಎಂಬುದು ವಿಶೇಷ. ಅದರ ಜೊತೆಗೆ ಗದಗ ನಗರದ ಹತ್ತಿರವೇ ಬೃಹತ್ ಮಠ ಕಟ್ಟಲಾಗಿದ್ದು, ಸಕಲ ಸದ್ಭಕ್ತರಿಗೆ ಸಂತಸದ ವಿಷಯ. ಈ ಮಠವನ್ನು ಭಕ್ತರು ಮಿನಿ ಮಂತ್ರಾಲಯ ಅಥವಾ ಶಾಖಾ ಮಠ ಎಂದೇ ಕರೆಯುತ್ತಾರೆ ಮತ್ತು ಮಠದ ಆವರಣದಲ್ಲಿ ಉದ್ಯಾನವನ ನಿರ್ಮಾಣಕ್ಕಾಗಿ ಉದ್ದೇಶಿಸಲಾಗಿದೆ. ಗದಗ ಪಟ್ಟಣದಿಂದ ಕೇವಲ ಮೂರು ಕಿ.ಮೀ ದೂರದಲ್ಲಿರುವ ಕಳಸಾಪುರ ಗ್ರಾಮದ ಹೊರವಲಯದಲ್ಲಿ ಶ್ರೀನಿವಾಸ ಶಿರಹಟ್ಟಿ ಮತ್ತು ಸಹೋದರರು ಏಳು ನಿವೇಶನಗಳನ್ನು ದಾನ ಮಾಡಿದ್ದಾರೆ ಹಾಗೂ ಮಂತ್ರಾಲಯ ಮೂಲ ಮಠವು ಇದಕ್ಕೆ ಸಹಕಾರ ನೀಡಿದೆ.

ಈ ಮಠದ ವಿಶೇಷತೆಗಳೆಂದರೆ, 1903ರಿಂದ ಇಲ್ಲಿಯವರೆಗಿನ ಮಂತ್ರಾಲಯ ಮಠದ ಎಲ್ಲಾ ಪೀಠಾಧಿಪತಿಗಳ ಹಳೆಯ ಛಾಯಾಚಿತ್ರಗಳು. ಮಂತ್ರಾಲಯದಲ್ಲಿ ರಾಘವೇಂದ್ರಸ್ವಾಮಿಗಳ ಫೋಟೋಗಳನ್ನು ಪ್ರದರ್ಶಿಸುವ ಎಲ್ಲಾ ಪೀಠಾಧಿಪತಿಗಳ ಛಾಯಾಚಿತ್ರಗಳನ್ನು ಈ ಮಿನಿ ಮಂತ್ರಾಲಯದಲ್ಲಿ ಇಲ್ಲಿ ಕಾಣಬಹುದು. ಈ ಮಠದಲ್ಲಿ, ಭಕ್ತರು ಜೀವನ ಚರಿತ್ರೆಯ ವಿವರಗಳೊಂದಿಗೆ ರಾಘವೇಂದ್ರ ಸ್ವಾಮಿಗಳ ದೊಡ್ಡ ಫಲಕವನ್ನು ನೋಡಬಹುದು. ರಾಘವೇಂದ್ರ ಸ್ವಾಮಿಗಳು 1671ರ ಶ್ರಾವಣ ಶುಕ್ರವಾರದಂದು ತುಂಗಭದ್ರಾ ಜಲಾನಯನ ಪ್ರದೇಶದ ಬಳಿ ಬೃಂದಾವನವನ್ನು ಪ್ರವೇಶಿಸಿದರು ಎಂದೂ ಉಲ್ಲೇಖಿಸಲಾಗಿದೆ.

ನಮ್ಮ ಗ್ರಾಮದಲ್ಲಿ ಶಾಖಾ ಮಠವನ್ನು ಸ್ಥಾಪಿಸಿದ್ದಕ್ಕಾಗಿ ನಾವು ಮಂತ್ರಾಲಯದ ಆಡಳಿತ ಮತ್ತು ಸುಬುಧೇಂದ್ರತೀರ್ಥ ಮಠಾಧೀಶರಿಗೆ ಕೃತಜ್ಞರಾಗಿರುತ್ತೇವೆ. ಮಠದ ಉದ್ಘಾಟನೆ ಇತ್ತೀಚೆಗೆ ವಿಜೃಂಭಣೆಯಿಂದ ನಡೆಯಿತು. ಗುರುವಾರ ಮತ್ತು ಭಾನುವಾರದಂದು ಅಪಾರ ಭಕ್ತರ ಆಗಮನ ನೋಡಿ ನಮಗೆ ಸಂತೋಷವಾಗಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಮತ್ತು ಕಳಸಾಪುರದ ಹಿರಿಯರಾದ ಶರದರಾವ್ ಹುಯಿಲಗೋಳ.

ನಮ್ಮ ಗ್ರಾಮದಲ್ಲಿ ಈಗ ಮಿನಿ ಮಂತ್ರಾಲಯವಿದೆ ಮತ್ತು ಶೀಘ್ರದಲ್ಲೇ ಮಠದ ಮುಂದೆ ಸುಂದರವಾದ ಉದ್ಯಾನವನ ಬರಲಿದೆ ಎನ್ನುತ್ತಾರೆ ಕಳಸಾಪುರ ಗ್ರಾಮದ ಕನ್ನಡ ಅಜ್ಜ ಎಂದೇ ಖ್ಯಾತಿ ಹೊಂದಿರುವ ಮಲ್ಲಿಕಾರ್ಜುನ ಖಂಡೆಮ್ಮನವರ.

ರಾಘವೇಂದ್ರ ಸ್ವಾಮಿಯ ಭಕ್ತರಾದ ಬೆಟಗೇರಿಯ ಶ್ರೀನಿವಾಸ ಹುಬ್ಬಳ್ಳಿ ಅವರು, ರಾಘವೇಂದ್ರ ಸ್ವಾಮಿ ಮಠವು ಗದಗ ಹತ್ತಿರ ಕಳಸಾಪುರ ಗ್ರಾಮದ ಹತ್ತಿರ ಭವ್ಯವಾಗಿ ಕಟ್ಟಲ್ಪಟ್ಟಿದ್ದು, ಈ ಕಾರ್ಯಕ್ಕೆ ಮುಂದಾದ ಎಲ್ಲ ಸದ್ಭಕ್ತರಿಗೂ ಗುರು ರಾಘವೇಂದ್ರರು ಒಳ್ಳೆಯದನ್ನು ಮಾಡಲಿ ಹಾಗೂ ರಿಂಗ್ ರೋಡಿನಲ್ಲಿ ಸಂಚರಿಸುವ ಪ್ರಯಾಣಿಕರೂ ಮಠದ ಬಗ್ಗೆ ತಿಳಿಯುವಂತೆ ಫಲಕಗಳನ್ನು ಹಾಕಿ ಅನುಕೂಲ ಕಲ್ಪಿಸಲು ವಿನಂತಿಸುತ್ತಾರೆ.

– ರಘೋತ್ತಮ ಕೊಪ್ಪರ,

ಪತ್ರಕರ್ತರು, ಪಾರಂಪರಿಕ ವೈದ್ಯರು.

ಗದಗ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!