57 ದಿನಗಳ ಬಳಿಕ ಭೂಮಿಗೆ ವಿದಾಯ ಹೇಳಿದ ‘ಮಿನಿ ಮೂನ್’

0
Spread the love

ಸುದೀರ್ಘ 57 ದಿನಗಳ ಕಾಲ ಚಂದ್ರನಂತೆಯೇ ಭೂಮಿಯನ್ನು ಸುತ್ತುತ್ತಿದ್ದ `ಮಿನಿ ಮೂನ್’ ನವೆಂಬರ್ 25ರಂದು ಭೂಮಿಗೆ ವಿದಾಯ ಹೇಳಿದೆ. ಇದು ವಿಜ್ಞಾನಿಗಳಿಗೆ ಬೇಸರ ತರಿಸಿದ್ದರು ಜನವರಿಯಲ್ಲಿ ಮತ್ತೆ ಭೂಮಿಗೆ ಬರಲಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ `ನಾಸಾ’ ತಿಳಿಸಿದೆ.

Advertisement

2024 ಪಿಟಿ5 ಎಂದು ಹೆಸರಿನಿಂದ ಕರೆಯಲಾದ ಸುಮಾರು 33 ಅಡಿ ಗಾತ್ರದ ಈ ಕ್ಷುದ್ರಗ್ರಹ ಕುದುರೆಲಾಳದ ಆಕಾರದ ಪಥದ ರೂಪದಲ್ಲಿ ಭೂಮಿಯನ್ನು ಸುತ್ತುತ್ತಿತ್ತು. ಸೂರ್ಯನ ಬಲವಾದ ಗುರುತ್ವಾಕರ್ಷಣೆಯ ಕಾರಣದಿಂದ ಇದೀಗ 57 ದಿನಗಳ ಬಳಿಕ ಭೂಮಿಯಿಂದ ದೂರ ಸರಿಯುತ್ತಿದೆ. 2025ರಲ್ಲಿ ಮತ್ತೆ ಭೂಮಿಗೆ ಬರಲಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಕ್ಷುದ್ರಗ್ರಹವು ಭೂಮಿಗೆ 1.8 ಮಿಲಿಯನ್ ಕಿಲೋಮೀಟರ್‌ಗಳಷ್ಟು ಸಮೀಪದಲ್ಲಿ ಹಾದುಹೋದಾಗ ಅದನ್ನು ವೀಕ್ಷಿಸಲು ರಾಡಾರ್ ಆಂಟೆನಾವನ್ನು ಬಳಸಲು ನಾಸಾ ಯೋಜಿಸುತ್ತಿದೆ. ಮೊಜಾವೆ ಮರುಭೂಮಿಯಲ್ಲಿರುವ ರಾಡಾರ್ ಕ್ಷುದ್ರಗ್ರಹದ ಗಾತ್ರ, ಆಕಾರ ಮತ್ತು ಸಂಯೋಜನೆಯ ಬಗ್ಗೆ ಡೇಟಾವನ್ನು ಒದಗಿಸುತ್ತದೆ. ನಿಕಟ ಆದರೆ ಸುರಕ್ಷಿತ ಹಾರಾಟದ ನಂತರ, ಕ್ಷುದ್ರಗ್ರಹವು ಮತ್ತೆ ಸೌರವ್ಯೂಹಕ್ಕೆ ಜೂಮ್ ಆಗುತ್ತದೆ ಮತ್ತು 2055 ರವರೆಗೆ ಭೂಮಿಯ ಬಳಿ ಹಿಂತಿರುಗುವುದಿಲ್ಲ.

ಕ್ಷುದ್ರಗ್ರಹವನ್ನು ಮೊದಲು ಗುರುತಿಸಿದಾಗಿನಿಂದ, ಅದರ ಮೂಲದ ಬಗ್ಗೆ ವಿವಿಧ ಸಿದ್ಧಾಂತಗಳನ್ನು ಸೂಚಿಸಲಾಗಿದೆ. ಪುರಾತನ ಪ್ರಭಾವದಿಂದ ಇದು ಭೂಮಿಯ ಚಂದ್ರನ ಒಂದು ಭಾಗವಾಗಿರಬಹುದು ಎಂದು NASA ಅಧಿಕಾರಿಗಳು ಊಹಿಸಿದ್ದಾರೆ.

ಆಗಸ್ಟ್ 7ರಂದು `ಪುಟಾಣಿ ಚಂದ್ರ’ನನ್ನು ನಾಸಾದ `ಅಟ್ಲಾಸ್’ ವ್ಯವಸ್ಥೆ ಪತ್ತೆಹಚ್ಚಿದ್ದು ಸೆಪ್ಟಂಬರ್ 29ರಿಂದ ನವೆಂಬರ್ 25ರವರೆಗೆ ಭೂಮಿಯನ್ನು ಸುತ್ತಲಿದೆ ಎಂದು ಮಾಹಿತಿ ನೀಡಿತ್ತು. ಇದನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ. ಶಾಶ್ವತ ಚಂದ್ರನು ಭೂಮಿಯನ್ನು ಸ್ಥಿರವಾದ ರೀತಿಯಲ್ಲಿ ಸುತ್ತುತ್ತಿದ್ದರೆ, ಭೂಮಿ ಮತ್ತು ಸೂರ್ಯನ ಗುರುತ್ವಾಕರ್ಷಣೆಯ ಪ್ರಭಾವಕ್ಕೆ ಸಿಲುಕಿರುವ ಪುಟಾಣಿ ಚಂದ್ರ ಕುದುರೆಲಾಳದ ಆಕಾರದಲ್ಲಿ ಭೂಮಿಯನ್ನು ಸುತ್ತುತ್ತಿತ್ತು. ಅಂದರೆ ಭೂಮಿಯನ್ನು ಪೂರ್ತಿಯಾಗಿ ಸುತ್ತದೆ, ಸೂರ್ಯನ ಗುರುತ್ವಾಕರ್ಷಣೆಯಿಂದ ಎಳೆಯಲ್ಪಟ್ಟು ಮೇಲ್ಮೈಗೆ ಸಮೀಪದಲ್ಲಿ ಹಾರಿಹೋಗುತ್ತಿತ್ತು.


Spread the love

LEAVE A REPLY

Please enter your comment!
Please enter your name here